ತುಮಕೂರು : ರಾಜ್ಯದಲ್ಲಿ ಬೆಚ್ಚಿ ಬೀಳಿಸುವಂತಹ ಕೊಲೆಯಾಗಿದ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಹತ್ಯೆಯ ಬಳಿಕ ವ್ಯಕ್ತಿಯ ಮರ್ಮಾಂಗ ಕತ್ತರಿಸಿ ದುಷ್ಕರ್ಮಿಗಳು ವಿಕೃತಿ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಈ ಒಂದು ಬರ್ಬರವಾದ ಹತ್ಯೆ ನಡೆದಿದೆ.
ಗ್ರಾಮದ ಬಳಿ ಮೆಕ್ಕೆಜೋಳ ಗದ್ದೆಯಲ್ಲಿ ಕಲ್ಮೇಶ್ ಕೋಟಿ (50) ಭೀಕರವಾಗಿ ಕೊಲೆಯಾಗಿದ್ದಾರೆ. ಕಲ್ಮೇಶ ಹತ್ಯೆಯ ಬಳಿಕ ಮರ್ಮಾಂಗ ಕತ್ತರಿಸಿರುವ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ತುಮಕೂರಿನಲ್ಲಿ ಹೋಂ ಕೇರ್ ನಲ್ಲಿ ಕಲ್ಮೇಶ್ ಕೋಟಿ ಕೆಲಸ ಮಾಡುತ್ತಿದ್ದರು. ಹತ್ತು ದಿನಗಳ ಹಿಂದೆ ಅಷ್ಟೇ ಕಲ್ಮೇಶ್ ಗ್ರಾಮಕ್ಕೆ ಬಂದಿದ್ದರು. ಕೊಲೆಯಾದ ಕಲ್ಮೇಶ್ ಕೋಟಿ ವಿರುದ್ಧ ತಾಯಿಯೊಂದಿಗೆ ವಾಸವಿದ್ದ.
10 ವರ್ಷಗಳ ಹಿಂದೆ ಕಲ್ಮೇಶ್ ಪತ್ನಿ ಕೂಡ ಬಿಟ್ಟು ಹೋಗಿದ್ದಳು. ಕೊಲೆ ವಿಚಾರ ತಿಳಿದು ಗ್ರಾಮಕ್ಕೆ ಪತ್ನಿ ಹಾಗೂ ಮಗ ಆಗಮಿಸಿದ್ದಾರೆ. ಘಟನೆಯಿಂದ ಹಿರೇನಂದಿಹಳ್ಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಎಸ್ ಪಿ ರಾಮರಾಜನ್ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದಾರೆ. ಹಣಕಾಸು, ಆಸ್ತಿ ಹಾಗೂ ಹೆಣ್ಣಿನ ವಿಚಾರವಾಗಿ ಮೂರು ಆಯಾಮದಲ್ಲಿ ತೆನೆಗೆ ನಡೆಸುತ್ತಿದ್ದಾರೆ. ನಾಲ್ಕು ದಿನಗಳ ಹಿಂದೆ ನಡೆದಿರುವ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








