ಹಾಸನ : ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನ ಅಧಿದೇವತೆ, ಐತಿಹಾಸಿಕ ಹಾಸನಾಂಬೆ ದರ್ಶನ ಸಂಪನ್ನಗೊಂಡಿದೆ. ನಿನ್ನೆ ಸಂಜೆ 5 ಗಂಟೆಗೆ ಸಾರ್ವಜನಿಕರಿಗೆ ಹಾಸನಾಂಬೆ ದರ್ಶನ ಬಂದ್ ಆಗಿದ್ದು, ಕೊನೇ ಕ್ಷಣದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಓಡೋಡಿ ಬಂದು ದೇವರ ದರ್ಶನ ಪಡೆದರು.
ಇನ್ನು ಹಾಸನಾಂಬೆ ದರ್ಶನೋತ್ಸವಕ್ಕೆ ಇಂದು ಅದ್ದೂರಿಯಾಗಿ ತೆರೆ ಬಿದ್ದಿದೆ. ಹಾಸನಾಂಬೆ ಗರ್ಭಗುಡಿಯ ಬಾಗಿಲನ್ನು ಕ್ಲೋಸ್ ಮಾಡಲಾಗಿದೆ. ದೇಗುಲದಲ್ಲಿ ದೀಪ ಇಟ್ಟು ಅರ್ಚಕರು ಬಾಗಿಲು ಮುಚ್ಚಿದ್ದಾರೆ. ದೇವಿಯ ಅಲಂಕಾರ ತೆರವಾದ ಬಳಿಕ ವಿಶ್ವರೂಪದ ದರ್ಶನ ಆಗಲಿದೆ. ವಿಶ್ವರೂಪದ ಕ್ಷಣದ ಬಳಿಕ ಗರ್ಭಗುಡಿಯ ಬಾಗಿಲು ಬಂದ್ ಮಾಡಲಾಯಿತು. ಅಕ್ಟೋಬರ್ 9 ರಿಂದ ಭಕ್ತರಿಗೆ ಹಾಸನಾಂಬೆ ದೇವಿ ದರ್ಶನ ನೀಡಿದ್ದಳು.
ಈ ಬಾರಿ 13 ದಿನಗಳ ಕಾಲ ಹಾಸನಾಂಬೆ ದೇವಿ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಈವರೆಗೆ ಒಟ್ಟು 26 ಲಕ್ಷ ಜನರು ಹಾಸನಾಂಬೆ ದರ್ಶನ ಪಡೆದು ಪುನೀತರಾಗಿದ್ದಾರೆ. ಈ ಬಾರಿ ಹಾಸನಾಂಬೆ ದರ್ಶನಕ್ಕೆ ಜಿಲ್ಲಾಡಳಿತ ವಿಶೇಷ ವ್ಯವಸ್ಥೆಗಳನ್ನು ಮಾಡಿತ್ತು. ಪ್ರತಿದಿನ ಲಕ್ಷಾಂತರ ಭಕ್ತರು ಸರತಿ ಸಾಲಿನಲ್ಲಿ ಬಂದು ದೇವಿ ದರ್ಶನ ಪಡೆದಿದ್ದಾರೆ.