ಕೊಪ್ಪಳ : ತಾಯಿ ಹೆಸರಲ್ಲಿ ಇರುವ ಆಸ್ತಿಯನ್ನು ಪುತ್ರನ ಹೆಸರಲ್ಲಿ ಮಾಡಿಕೊಡುವಂತೆ ಒತ್ತಾಯಿಸಿ ಪಂಚಾಯತಿ ಕಚೇರಿಯಲ್ಲೇ ಮಹಿಳಾ PDO ಅಧಿಕಾರಿ ಮೇಲೆ ಗ್ರಾಂ ಪಂಚಾಯತ್ ಸದಸ್ಯೆ ಹಾಗು ಆಕೆಯ ಮಗ ಚಪ್ಪಲಿಯಿಂದ ಹಲ್ಲೆ ನಡೆಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಹೌದು ಈ ಒಂದು ಘಟನೆ ನಡೆದಿದ್ದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇಮಾಗೇರಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.ಹಲ್ಲೆಗೆ ಒಳಗಾದಂತ ಮಹಿಳಾ ಅಧಿಕಾರಿಯನ್ನು ಪಿಡಿಒ ರತ್ನಮ್ಮ ಗುಂಡಣ್ಣನವರ ಎಂದು ತಿಳಿದುಬಂದಿದೆ.
ಇನ್ನು ಹಲ್ಲೆ ಮಾಡಿದವರನ್ನು ಗ್ರಾಮ ಪಂಚಾಯಿತಿ ಸದಸ್ಯೆ ಶಾಂತಮ್ಮ ಬಂಡಿವಂಡರ, ಪುತ್ರ ಭೀಮೇಶ್ ಎನ್ನಲಾಗಿದೆ. ತಾಯಿ ಹೆಸರಲ್ಲಿ ಇದ್ದ ಆಸ್ತಿಯನ್ನು ಪುತ್ರನ ಹೆಸರಿಗೆ ಮಾಡಿಕೊಡುವಂತೆ ಒತ್ತಾಯಿಸಿ ಹಲ್ಲೆ ಮಾಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.