ಕಲಬುರ್ಗಿ : ಚಲಿಸುತ್ತಿದ್ದ ಬೈಕ್ ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ಚಲಿಸುತ್ತಿದ್ದ ಗ್ರಾಮ ಪಂಚಾಯಿತಿ ಸದಸ್ಯೆ ಒಬ್ಬರು ಸ್ಥಳದಲ್ಲೆ ಸಾವಣ್ಣಪ್ಪಿದರೆ ಆಕೆಯ ಮಗ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಧುತ್ತರಗಾಂವ- ಭೂಸನೂರು ರಸ್ತೆ ಮಾರ್ಗದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಧಂಗಾಪುರ ಗ್ರಾಮ ಪಂಚಾಯತ್ ಸದಸ್ಯೆ ಶರಣಮ್ಮ ಗುರುಶರಣ ನಾಲ್ನೋಡಿ(44) ಎಂದು ತಿಳಿದುಬಂದಿದೆ. ಇನ್ನು ಗಾಯಗೊಂಡ ಯುವಕನನ್ನು ಆಕೆಯ ಮಗ ಎನ್ನಲಾಗಿದ್ದು, ವಿರೇಶ ಗುರುಶರಣ ನಾಲ್ನೋಡಿ(18) ಗಂಭೀರವಾಗಿ ಗಾಯಗೊಂಡಿದ್ದಾನೆ.ಸದ್ಯ ಯುವಕ ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.