ಬೆಂಗಳೂರು : ಬೆಂಗಳೂರಿನಿಂದ ತಮಿಳುನಾಡಿನವರೆಗೆ ಮೆಟ್ರೋ ನಿರ್ಮಿಸುವ ವಿಚಾರವಾಗಿ ಹೊಸೂರು ಮೆಟ್ರೋ ನಿರ್ಮಾಣಕ್ಕೆ ಇದೀಗ ರಾಜ್ಯ ಸರ್ಕಾರ ತಾತ್ಕಾಲಿಕ ಬ್ರೇಕ್ ಹಾಕಿದೆ.ಬೆಂಗಳೂರಿನಿಂದ ಹೊಸೂರಿನವರೆಗೆ ಮೆಟ್ರೋ ವಿಸ್ತರಿಸದಂತೆ ಹಿರಿಯ ಸಚಿವರು ಸಲಹೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಹೊಸೂರಿಗೆ ಬೆಂಗಳೂರಿನಿಂದ ಮೆಟ್ರೋ ಬೇಡ ಎಂದು ಹಿರಿಯ ಸಚಿವರು ಸಲಹೆ ನೀಡಿದ್ದಾರೆ ಮೊನ್ನೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಹಿರಿಯ ಸಚಿವರಿಂದ ಸಲಹೆ ನೀಡಲಾಗಿದೆ. ಹೀಗಾಗಿ ಸದ್ಯ ಬೆಂಗಳೂರಿನಿಂದ ಹೊಸೂರಿನವರೆಗೆ ಮೆಟ್ರೋ ನಿರ್ಮಾಣಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ.
ಅಕಸ್ಮಾತ್ ಬೆಂಗಳೂರಿನಿಂದ ಸೋರಿನವರೆಗೆ ಮೆಟ್ರೋ ರೈಲು ನಿರ್ಮಾಣ ಮಾಡಿದ್ದೆ ಆದಲ್ಲಿ ರಾಜ್ಯದಲ್ಲಿರುವಂತಹ ಕೈಗಾರಿಕಾ ಸಂಸ್ಥೆಗಳಿಗೆ ಹೊಡೆತ ಬೀಳಲಿದೆ. ಹೊಸೂರಿನಲ್ಲಿ ಈಗಾಗಲೇ ಕೈಗಾರಿಕಾ ಕಾರ್ಖಾನೆಗಳು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರಿನ ಜನತೆ ಸಹಜವಾಗಿ ಹೊಸೂರಿಗೆ ಮೆಟ್ರೋ ಮೂಲಕ ಸಂಚರಿಸಿ ಅಲ್ಲಿ ಕಾರ್ಯ ನಿರ್ವಹಿಸಬಹುದು ಹಾಗಾಗಿ ರಾಜ್ಯದಲ್ಲಿ ಕೈಗಾರಿಕರಣ ಸಹಜವಾಗಿ ಕುಂಠಿತಗೊಳ್ಳಲಿದೆ.
ಇನ್ನೂ ಹೊಸೂರಲ್ಲಿ ತಮಿಳುನಾಡು ಸರ್ಕಾರದಿಂದ ಏರ್ಪೋರ್ಟ್ ನಿರ್ಮಾಣ ಮಾಡಲಿದ್ದು, ಅದರ ಬೆನ್ನಲ್ಲೆ ಇದೀಗ ಬೆಂಗಳೂರಲ್ಲಿ ಮತ್ತೊಂದು ಏರ್ಪೋರ್ಟ್ ನಿರ್ಮಾಣಕ್ಕೆ ಸರ್ಕಾರ ಪ್ಲಾನ್ ಮಾಡಿದೆ. ಬೆಂಗಳೂರು ಸುತ್ತ ಮೂರು ಪ್ರದೇಶದ 5 ಸೈಟ್ ಗಳನ್ನು ಸರ್ಕಾರ ಗುರುತಿಸಿದೆ. ಬಿಡದಿ, ಕುಣಿಗಲ್, ತುಮಕೂರು ಹಾಗೂ ಜಿಗಣಿ ಪ್ರದೇಶದಲ್ಲಿ ಸರ್ಕಾರ ಪರಿಶೀಲನೆ ಮಾಡಿದೆ.
ಜಿಗಣಿ ಪ್ರದೇಶದಲ್ಲಿ ಕನಿಷ್ಠ 4 ಸಾವಿರ ಎಕರೆ ಪ್ರದೇಶ ಲಭ್ಯವಿಲ್ಲವಾದ್ದರಿಂದ ಅಲ್ಲಿ ನಿರ್ಮಾಣ ಅಸಾಧ್ಯ. ಇನ್ನು ಉಳಿದ ಕಡೆ ಏರ್ಪೋರ್ಟ್ ನಿರ್ಮಾಣ ಮಾಡಲು ವರದಿ ಸಿದ್ದಪಡಿಸೋಕೆ ಕೈಗಾರಿಕಾ ಇಲಾಖೆಗೆ ಸೂಚಿಸಿದ್ದು, ಏರ್ ಪೋರ್ಟ್ ನಿರ್ಮಾಣಕ್ಕೆ ಹೆಚ್ಚಿನ ಒಲವನ್ನು ಸರ್ಕಾರ ತೋರಿದೆ ಎಂದು ತಿಳಿದು ಬಂದಿದೆ.