ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿದ್ದರು. ಅಲ್ಲದೆ ಈ ಪ್ರಕರಣದ ಕುರಿತು ಸಿಎಂ ಸಿದ್ದರಾಮಯ್ಯ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಆದೇಶ ರದ್ದುಪಡಿಸುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದರು. ಹಾಗಾಗಿ ನಾಳೆ ಹೈ ಕೋರ್ಟ್ ಮಧ್ಯಾಹ್ನ 12 ಗಂಟೆಗೆ ತೀರ್ಪು ಪ್ರಕಟಿಸಲಿದ್ದು, ಸಿಎಂ ಸಿದ್ದರಾಮಯ್ಯ ಅವರ ಭವಿಷ್ಯ ನಿರ್ಧಾರವಾಗಲಿದೆ.
ಇದೆಲ್ಲದರ ಮಧ್ಯ ರಾಜ್ಯಪಾಲರ ವಿರುದ್ಧ ಇದೀಗ ರಾಷ್ಟ್ರಪತಿಗಳಿಗೆ ದೂರು ನೀಡುವ ಕುರಿತು ದೂರು ನೀಡುವ ಮೂಲಕ ಸಿದ್ದರಾಮಯ್ಯ ಹೊಸ ದಾಳ ಉರುಳಿಸಲಿದ್ದಾರೆ. ರಾಜ್ಯಪಾಲರು ಸಣ್ಣ ಕಾರಣಕ್ಕೂ ರಿಪೋರ್ಟ್ ಕೇಳುತ್ತಿದ್ದಾರೆ. ಅವರ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡುವ ಕುರಿತು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಯಾರೋ ಒಬ್ಬ ವ್ಯಕ್ತಿ ದೂರು ನೀಡಿದ್ದಾನೆ ಎಂದರೆ ಪ್ರತಿಯೊಂದಕ್ಕೂ ವರದಿ ಕೇಳುತ್ತಾರೆ. ಸಿದ್ದರಾಮಯ್ಯ ಯಾವಾಗಲೂ ಕನ್ನಡದಲ್ಲಿ ಸಹಿ ಹಾಕುತ್ತಾರೆ. ಆದರೆ ಇಂಗ್ಲಿಷ್‌ನಲ್ಲಿ ಸಹಿ ಮಾಡಿದ್ದಾರೆ. ಅದಕ್ಕೆ ತನಿಖೆ ಮಾಡಿ ಅಂತ ದೂರು ಕೊಟ್ಟಿದ್ದಾನೆ. ಇದು ವಿಷಯನಾ? ಸಹಿ ಕನ್ನಡದಲ್ಲಿ ಆದರು ಮಾಡಬಹುದು, ಇಂಗ್ಲಿಷ್‌ನಲ್ಲಿ ಬೇಕಾದರೂ ಮಾಡಬಹುದು ಎಂದು ತಿಳಿಸಿದರು.
ಯಾವ ಭಾಷೆ ಬರುತ್ತೋ ಆ ಭಾಷೆಯಲ್ಲಿ ಸಹಿ ಮಾಡಬಹುದು. ನಾನು ಸಾಮಾನ್ಯವಾಗಿ ಕನ್ನಡದಲ್ಲಿ ಇರೋ ಡ್ರಾಪ್ಟ್ ಗಳಿಗೆ ಕನ್ನಡದಲ್ಲಿ ಸಹಿ ಮಾಡುತ್ತೇನೆ. ಇಂಗ್ಲಿಷ್‌ನಲ್ಲಿ ಡ್ರಾಫ್ಟ್ ಇದ್ದರೆ, ಬೇರೆ ರಾಜ್ಯಗಳಿಗೆ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಾಗ ಇಂಗ್ಲಿಷ್‌ನಲ್ಲಿ ಸಹಿ ಮಾಡುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.