Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗಮನಿಸಿ : ಮಾ.1ರಿಂದ ಹೊಸ ನಿಯಮಗಳು ಜಾರಿ, ಅಡುಗೆಮನೆಯಿಂದ ಪ್ರಯಾಣದವರೆಗೆ ನಿಮ್ಮ ನೇರ ಪರಿಣಾಮ!

28/02/2026 10:05 PM

BREAKING : ‘ಹಾರ್ಮುಜ್ ಜಲಸಂಧಿ’ ಮುಚ್ಚುವುದಾಗಿ ಇರಾನ್ ಘೋಷಣೆ, ಹಡಗು ಸಂಚಾರ ರದ್ದು

28/02/2026 9:58 PM

ಇರಾನ್ ಉದ್ವಿಗ್ನತೆಯ ಮಧ್ಯೆ ಸೌದಿ ಅರೇಬಿಯಾ, ಗಲ್ಫ್ ರಾಷ್ಟ್ರಗಳಿಗೆ ಬೆಂಬಲ ಘೋಷಿಸಿದ ಪಾಕಿಸ್ತಾನ

28/02/2026 9:54 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಸರ್ಕಾರ ಯಾವುದೇ ಅರ್ಹ ‘BPL’ ಕಾರ್ಡ್ ಗಳನ್ನು ರದ್ದುಪಡಿಸಿಲ್ಲ : ಸಚಿವ ಕೆ.ಎಚ್ ಮುನಿಯಪ್ಪ ಸ್ಪಷ್ಟನೆ
KARNATAKA

BREAKING : ಸರ್ಕಾರ ಯಾವುದೇ ಅರ್ಹ ‘BPL’ ಕಾರ್ಡ್ ಗಳನ್ನು ರದ್ದುಪಡಿಸಿಲ್ಲ : ಸಚಿವ ಕೆ.ಎಚ್ ಮುನಿಯಪ್ಪ ಸ್ಪಷ್ಟನೆ

By kannadanewsnow0521/11/2024 12:28 PM

ಬೆಂಗಳೂರು : ಅರ್ಹ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿರುವ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸಿ ಇದೀಗ ವಿಪಕ್ಷ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಗಾಗಿ ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಆಹಾರ ಇಲಾಖೆಯ ಸಚಿವ ಕೆಎಚ್ ಮುನಿಯಪ್ಪ ಸರ್ಕಾರ ಯಾವುದೇ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.

ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಡ್ಗಳನ್ನು ಪರಿಶೀಲಿಸಿ ಬಿಪಿಎಲ್ ಕಾರ್ಡ್ ಗಳನ್ನು ಎಪಿಎಲ್ ಗೆ ಸೇರಿಸಲಾಗಿದೆ. ಆದಾಯ ತೆರಿಗೆ ಹಾಗೂ ಸರ್ಕಾರಿ ನೌಕರರನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಬಿಪಿಎಲ್ ಕಾರ್ಡ್ ನೀಡಲಾಗುತ್ತದೆ. ಆದರೆ ಅರ್ಹರ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿಲ್ಲ. ರಾಜ್ಯದಲ್ಲಿ 66 ಪರ್ಸೆಂಟ್ ಬಿಪಿಎಲ್ ಕಾರ್ಡ್ ಗಳಿವೆ. ಮಾನದಂಡಗಳ ಅನ್ವಯ ಪರಿಶೀಲನೆ ಮಾಡಿ ಪರಿಷ್ಕರಣೆ ಮಾಡಲಾಗಿದೆ.

ಮಾನದಂಡಗಳ ಅನ್ವಯ ಪರಿಷ್ಕರಣೆ ಮಾಡಲಾಗಿದೆ. ಕೇಂದ್ರದ ನಿಯಮಗಳ ಅನ್ವಯ ಕಾರ್ಡುಗಳನ್ನು ಪರಿಷ್ಕರಣೆ ಮಾಡಲಾಗಿದೆ ಬಿಪಿಎಲ್ ಗೆ ಅನರ್ಹರು ಎಂದು ಕಂಡು ಬಂದಿರುವ ಕಾರ್ಡ್ ಎಪಿಎಲ್ ಗೆ ಬದ್ಲಾವಣೆ ಮಾಡಿದ್ದೇವೆ. ಆದರೆ ಯಾವುದೇ ಅರ್ಹ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸಿಲ್ಲ.

ಅನರ್ಹ ಇರಬಹುದು ಎಂಬಂತ ಕಾರ್ಡ್ ಗಳನ್ನು ಅಮಾನತ್ತಿನಲ್ಲಿ ಇಟ್ಟಿದ್ದೇವೆ. ತಾತ್ಕಾಲಿಕವಾಗಿ ಅಂಥವರ ಕಾರ್ಡುಗಳನ್ನು ಅಮಾನತ್ತಿನಲ್ಲಿ ಇಡಲಾಗಿದೆ. ಬಿಪಿಎಲ್ ಗೆ ಅರ್ಹರಿದ್ದು ಎಪಿಎಲ್ ಗೆ ಸೇರಿಸಿದ್ದರೆ, ಅಂಥವರಿಗೆ ಬಿಪಿಎಲ್ ಕಾರ್ಡ್ಗಳನ್ನು ಮರುಹಂಚಿಕೆ ಮಾಡುತ್ತೇವೆ ಎಂದು ಅವರು ಸ್ಪಷ್ಟನೆ ನೀಡಿದರು.

ಅರ್ಹರ ಕಾರ್ಡ ರದ್ದಾಗಿದ್ದರೂ ಸರಿಪಡಿಸುತ್ತೇವೆ ಒಂದು ವಾರದಲ್ಲಿ ಅವರ ಸಮಸ್ಯೆಯನ್ನು ಸರಿಪಡಿಸುತ್ತೇವೆ. ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ರದ್ದು ಮಾಡಿದ್ದೇವೆ. ನಾವು ಕಾಂಗ್ರೆಸ್ ಸರ್ಕಾರದಲ್ಲಿ 7 ಕೆಜಿ ಅಕ್ಕಿ ಕೊಡುತ್ತಿದ್ವಿ, ಬಿಜೆಪಿ ಬಂದ ಮೇಲೆ ಅದನ್ನು 5 ಕೆಜಿಗೆ ಇಳಿಸಿದ್ದಾರೆ ಎಂದು ತಿಳಿಸಿದರು.

ಬಿಪಿಎಲ್ ಗೆ ಅನರ್ಹರು ಎಂದು ಕಂಡು ಬಂದಿರುವವರು ಎಪಿಎಲ್ ಗೆ ಸೇರಿಸಲಾಗಿದೆ. ಅಂತಹ ಕಾರ್ಡ್ಗಳನ್ನು ಎಪಿಎಲ್ ಗೆ ಸೇರ್ಪಡೆ ಮಾಡಲಾಗಿದೆ. ಬಿಪಿಎಲ್ ಗೆ ಅರ್ಹರಿದ್ದರೂ ಕೂಡ ಎಪಿಎಲ್ ಕಾರ್ಡಿಗೆ ಸೇರಿಸಿದ್ದರೆ, ಅಂತವರಿಗೆ ಬಿಪಿಎಲ್ ಕಾರ್ಡ್ ಗಳನ್ನು ಮರುಹಂಚಿಕೆ ಮಾಡುತ್ತೇವೆ. ಒಟ್ಟು 98,473 ಜನ ತೆರಿಗೆ ಕಟ್ಟುತ್ತಿದ್ದಾರೆ. 4036 ಜನ ಸರ್ಕಾರಿ ನೌಕರರು ಇದ್ದಾರೆ. ಹಾಗಾಗಿ 1,02,509 ಕಾರ್ಡ್ ಗಳನ್ನು ರದ್ದು ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

Share. Facebook Twitter LinkedIn WhatsApp Email

Related Posts

ಹಾಸನ, ಕೊಡಗು, ಚಿಕ್ಕಮಗಳೂರು ಆನೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕ್ರಮ: ಸಚಿವ ಈಶ್ವರ ಖಂಡ್ರೆ

28/02/2026 9:27 PM2 Mins Read

BREAKING: ಬೆಂಗಳೂರಲ್ಲಿ ಘೋರ ದುರಂತ: ನೀರಿನ ಸಂಪು ಸ್ವಚ್ಛಗೊಳಿಸಲು ಇಳಿದ ಮೂವರು ಉಸಿರುಗಟ್ಟಿ ಸಾವು

28/02/2026 9:25 PM1 Min Read

ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತರಿಗೂ ವಂಚನೆ, ಯುವಜನರಿಗೂ ಅನ್ಯಾಯ: ಛಲವಾದಿ ನಾರಾಯಣಸ್ವಾಮಿ

28/02/2026 8:39 PM2 Mins Read
Recent News

ಗಮನಿಸಿ : ಮಾ.1ರಿಂದ ಹೊಸ ನಿಯಮಗಳು ಜಾರಿ, ಅಡುಗೆಮನೆಯಿಂದ ಪ್ರಯಾಣದವರೆಗೆ ನಿಮ್ಮ ನೇರ ಪರಿಣಾಮ!

28/02/2026 10:05 PM

BREAKING : ‘ಹಾರ್ಮುಜ್ ಜಲಸಂಧಿ’ ಮುಚ್ಚುವುದಾಗಿ ಇರಾನ್ ಘೋಷಣೆ, ಹಡಗು ಸಂಚಾರ ರದ್ದು

28/02/2026 9:58 PM

ಇರಾನ್ ಉದ್ವಿಗ್ನತೆಯ ಮಧ್ಯೆ ಸೌದಿ ಅರೇಬಿಯಾ, ಗಲ್ಫ್ ರಾಷ್ಟ್ರಗಳಿಗೆ ಬೆಂಬಲ ಘೋಷಿಸಿದ ಪಾಕಿಸ್ತಾನ

28/02/2026 9:54 PM

ಬೇಸಿಗೆಯ ಬಿಸಿಲಿಗೆ ಕಬ್ಬಿನ ಹಾಲು ಅಮೃತಕ್ಕೆ ಸಮಾನ: ಇಲ್ಲಿದೆ ಆರೋಗ್ಯಕರ ಪ್ರಯೋಜನ

28/02/2026 9:51 PM
State News
KARNATAKA

ಹಾಸನ, ಕೊಡಗು, ಚಿಕ್ಕಮಗಳೂರು ಆನೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕ್ರಮ: ಸಚಿವ ಈಶ್ವರ ಖಂಡ್ರೆ

By kannadanewsnow0928/02/2026 9:27 PM KARNATAKA 2 Mins Read

ಬಾಳೆಹೊನ್ನೂರು : ಅರಣ್ಯ ಸಂರಕ್ಷಣೆಯಲ್ಲಿ ಅರಣ್ಯವಾಸಿಗಳ ಪಾತ್ರ ಮಹತ್ವದ್ದಾಗಿದ್ದು, ಅರಣ್ಯ ಇಲಾಖೆ ಯಾವುದೇ ಜನರ ವಿರುದ್ಧವಿಲ್ಲ. ಆದರೆ, ಸುಪ್ರೀಂಕೋರ್ಟ್ ತೀರ್ಪು…

BREAKING: ಬೆಂಗಳೂರಲ್ಲಿ ಘೋರ ದುರಂತ: ನೀರಿನ ಸಂಪು ಸ್ವಚ್ಛಗೊಳಿಸಲು ಇಳಿದ ಮೂವರು ಉಸಿರುಗಟ್ಟಿ ಸಾವು

28/02/2026 9:25 PM

ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತರಿಗೂ ವಂಚನೆ, ಯುವಜನರಿಗೂ ಅನ್ಯಾಯ: ಛಲವಾದಿ ನಾರಾಯಣಸ್ವಾಮಿ

28/02/2026 8:39 PM

ನಾಳೆ ಹಾಸ್ಟೆಲ್ ಪ್ರವೇಶಕ್ಕೆ ಪರೀಕ್ಷೆ: 2.31 ಲಕ್ಷ ಮಕ್ಕಳು ಪರೀಕ್ಷೆ ಬರೆಯುವ ನಿರೀಕ್ಷೆ

28/02/2026 8:24 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.