ನವದೆಹಲಿ : ಆಧಾರ್ ಕಾರ್ಡ್ ಧೃಢಿಕರಣಕ್ಕೆ ಕೇಂದ್ರ ಸರ್ಕಾರ ಇದೀಗ ಖಾಸಗಿ ಕಂಪನಿಗಳಿಗೂ ಅನುಮತಿ ನೀಡಿದೆ.ಆಧಾರ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ, ಖಾಸಗಿ ಕಂಪನಿಗಳು ತಮ್ಮ ಸೇವೆಯನ್ನು ಒದಗಿಸುವ ಮೊದಲು ಫಲಾನುಭವಿಗಳ ಆಧಾರ್ ಕಾರ್ಡ್ ಅನ್ನು ಧೃಡೀಕರಿಸಲು ಸರ್ಕಾರ ಅನುಮತಿ ನೀಡಿದೆ. ಉತ್ತಮ ಆಡಳಿತಕ್ಕಾಗಿ ಆಧಾರ್ ಧೃಡೀಕರಣ ತಿದ್ದುಪಡಿ ನಿಯಮ, 20250 ಅಡಿಯಲ್ಲಿ ಕಾಯ್ದೆಯ ಸೆಕ್ಷನ್ 57ರ ಅಡಿಯಲ್ಲಿ ಈ ಸೌಲಭ್ಯವನ್ನು ನೀಡಿರುವುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಸಚಿವಾಲಯಗಳು/ ಸರ್ಕಾರದ ಇಲಾಖೆಗಳನ್ನು ಹೊರತುಪಡಿಸಿ ಆಧಾರ್ ಧೃಡೀಕರಣ ಮಾಡಬಯಸುವವರು ರ ಈ ಸೌಲಭ್ಯ ತಮಗೆ ಆಧಾರ್ ಯಾಕೆ ಬೇಕು ಎಂಬ ಬಗ್ಗೆ ಸಮರ್ಥನೆ ನೀಡಿ, ಸಂಬಂಧ ಪಟ್ಟ ಇಲಾಖೆ & ಸಚಿವಾಲಯಕ್ಕೆ ಮನವಿ ಸಲ್ಲಿಸಬೇಕುಎಂದು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.
ಹೀಗೆ ಸಲ್ಲಿಸಲಾದ ಪ್ರಸ್ತಾವನೆಯು ನಿಯಮ 3ರಕ್ಕೆ ಹಾಗೂ ದೇಶದ ಹಿತಾಸಕ್ತಿಗೆ ಅನುಗುಣವಾಗಿದೆಯೇ ಎಂಬುದನ್ನುಆಇಲಾಖೆ/ಸಚಿವಾಲಯ ಪರಿಶೀಲಿಸಿ, ಕೇಂದ್ರದ ಶಿಫಾರಸಿನೊಂದಿಗೆ ರವಾನಿಸುವುದು. ಇದನ್ನು ಯುಐಡಿಎಐ ಪರಿಶೀಲನೆಯ ಬಳಿಕ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಅನುಮೋದಿಸುವುದು ಎಂದು ತಿಳಿಸಲಾಗಿದೆ.