ಕೊಪ್ಪಳ : ಕೊಪ್ಪಳದ ಆನೆಗುಂದಿ ತೂಗು ಸೇತುವೆ ಕಾಮಗಾರಿ ನಷ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಷ್ಟ ಪರಿಹಾರದಲ್ಲಿ ಕಾನೂನು ಸಂಘರ್ಷ ಎದುರಾಗಿದ್ದು, 6 ಕೋಟಿಯ ಕಾಮಗಾರಿಗೆ 5219 ಕೋಟಿ ಪರಿಹಾರಕ್ಕೆ ಕೋರ್ಟ್ ಇದೀಗ ಆದೇಶ ನೀಡಿದೆ. ಸರ್ಕಾರಕ್ಕೆ ಹೊರ ರಾಜ್ಯದ ಗುತ್ತಿಗೆದಾರ ಇದೀಗ ಸೆಡ್ಡು ಹೊಡೆದಿದ್ದಾನೆ. ಹೀಗಾಗಿ ಸರ್ಕಾರದ ಲೆಕ್ಕಪತ್ರ ಸಮಿತಿಯು ಗುತ್ತಿಗೆದಾರಣ ಅರ್ಜಿಯಲ್ಲಿ ಪರಿಹಾರದ ಮತ್ತ ನೋಡಿ ಶಾಕ್ ಆಗಿದೆ.
ಹೌದು ಸರ್ಕಾರದ ವಿರುದ್ಧವೇ ಗುತ್ತಿಗೆದಾರ ಕಾನೂನು ಸಮರ ಹೂಡಿದ್ದು, ಪ್ರಕರಣ ಸಂಬಂಧ ಇದೀಗ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. 5219 ಕೋಟಿ ಪರಿಹಾರ ಕೊಡಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಕಂಟ್ರಾಕ್ಟರ್ ವರಸೆಗೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಇದೀಗ ಕಂಗಾಲಾಗಿದೆ.
ಆನೆಗುಂದಿ ತುಂಗಭದ್ರಾ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಬಳಿ ಸೇತುವೆ ನಿರ್ಮಾಣ ಮಾಡಲಾಗಿದೆ. ನವೆಂಬರ್ 1993ರಲ್ಲಿ ಈ ಒಂದು ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿತ್ತು. ನಬಾರ್ಡ್ ಸಾಲ ಸಹಾಯದ RIDF -2 ಯೋಜನೆ ಅಡಿ 4.12 ಕೋಟಿ ಮೊತ್ತದಲ್ಲಿ ಅನುಮೋದನೆ ಪಡೆಯಲಾಗಿತ್ತು.
ತುಂಗಭದ್ರಾ ನದಿ ಪಾತ್ರದಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ ಅನುಮೋದನೆ ಪಡೆಯಲಾಗಿತ್ತು. ಹೈದರಾಬಾದ್ ಮೂಲದ ಬಿಬಿ ಸುಬ್ಬಾರೆಡ್ಡಿ ಮತ್ತು ಸಂಸ್ಥೆಗೆ ಈ ಒಂದು ಟೆಂಡರ್ ನೀಡಲಾಗಿತ್ತು. ಟೆಂಡರ್ ಪಡೆದು 1997ರಲ್ಲಿ ಕಾಮಗಾರಿಯನ್ನು ಆರಂಭಿಸಲಾಗಿತ್ತು. 1999 ರಲ್ಲಿ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ಘೋಷಣೆ ಆಯಿತು ಘೋಷಣೆಯಾದ ಬಳಿಕ ಸೇತುವೆ ಕಾಮಗಾರಿ ಸ್ಥಗಿತವಾಗಿತ್ತು.
ಸರ್ಕಾರದ ಅನುಮತಿ ಪಡೆಯದೆ ಸೇತುವೆ ನಿರ್ಮಿಸಲಾಗಿದೆ ಎಂದು ಬೆಂಗಳೂರಿನಲ್ಲಿ ಎಂಎಲ್ಸಿ ಬಿಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದು, ಹೈದರಾಬಾದ್ ಮೂಲದ ಗುತ್ತಿಗೆದಾರನಿಂದ ಈ ಒಂದು ಕಾಮಗಾರಿ ನಡೆದಿದೆ. ಕಾಮಗಾರಿ ಮಾಡುವಾಗ ಸೇತುವೆ ಕುಸಿದು ಬೀಳುತ್ತೆ ಈ ಸಂದರ್ಭದಲ್ಲಿ ಸರ್ಕಾರ ಹಣ ಕೊಡುವುದಿಲ್ಲ. ಕಾಮಗಾರಿ ಗುತ್ತಿಗೆದಾರ ಕೋರ್ಟಿಗೆ ಹೋಗುತ್ತಾರೆ.ಕೊಪ್ಪಳ ನ್ಯಾಯಾಧೀಶರ ಮುಂದೆ ಅರ್ಜಿ ಹಾಕುತ್ತಾರೆ. 5219 ಕೋಟಿ ಪರಿಹಾರ ಕೊಡಬೇಕೆಂದು ಅರ್ಜಿ ಹಾಕುತ್ತಾರೆ ಎಂದು ತಿಳಿಸಿದರು.