ಹಾಸನ : ಮುಂದಿನ ನಾಲ್ಕೈದು ತಿಂಗಳಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಬದಲಾವಣೆ ಆಗುತ್ತದೆ. ಎಂದು ಜೆಡಿಎಸ್ ಎಂ ಎಲ್ ಸಿ ರೇವಣ್ಣ ಸ್ಪೋಟಕವಾದ ಹೇಳಿಕೆ ನೀಡಿದರು. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಜಾಕೇನಹಳ್ಳಿ ಕಟ್ಟೆ ಗ್ರಾಮದಲ್ಲಿ ಅವರು ಮಾತನಾಡಿದರು.
ಚಾಕೇನಹಳ್ಳಿಕಟ್ಟಿ ಗ್ರಾಮದಲ್ಲಿ ಎಂಎಲ್ಸಿ ಸೂರಜ್ ರೇವಣ್ಣ ಹೇಳಿಕೆ ನೀಡಿದ್ದು, ನಾಲ್ಕೈದು ತಿಂಗಳಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಬದಲಾಗುತ್ತದೆ. ಆಗ ಕಾಂಗ್ರೆಸ್ ಪಕ್ಷದ ಕಡೆ ಹೋಗಿರುವ ಅವರ ಕಥೆ ಏನಾಗಬಹುದು? ನಾಲ್ಕೈದು ತಿಂಗಳಲ್ಲಿ ಸರ್ಕಾರ ಬದಲಾವಣೆ ಆಯ್ತು ಅಂದುಕೊಳ್ಳೋಣ ಆಗ ಬಂದು ಎಚ್ ಡಿ ರೇವಣ್ಣ ಅವರಿಗೆ ಜೈ ಅಂತಾರೆ ಇದೇ ಕಥೆ. ಕೆಲವೇ ತಿಂಗಳಲ್ಲಿ ಸರ್ಕಾರ ಬದಲಾಗುತ್ತದೆ. ಎಂದು ಸ್ಪೋಟಕವಾದ ಹೇಳಿಕೆ ನೀಡಿದರು.