Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸರ್ಕಾರಿ ಸೌಲಭ್ಯ ಪಡೆಯಲು ಪೋಡಿ ಕಡ್ಡಾಯ: ರೈತರು ತಿಳಿಯಲೇಬೇಕಾದ ಪ್ರಮುಖ ವಿಚಾರಗಳಿವು.!

10/04/2026 1:04 PM

BREAKING : ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಭಾರಿ ಎಡವಟ್ಟು : 600ಕ್ಕೆ 683 ಅಂಕ ನೀಡಿದ ಇಲಾಖೆ!

10/04/2026 12:58 PM

BIG NEWS : 1 ಲಕ್ಷ ಲಂಚ ಪಡೆದು ಪರಾರಿಗೆ ಯತ್ನ : ಸಿನೆಮಾ ಸ್ಟೈಲ್ ನಲ್ಲಿ ಚೇಸ್ ಮಾಡಿ ಬಲೆಗೆ ಕೆಡುವಿದ ಲೋಕಾಯುಕ್ತ ಅಧಿಕಾರಿಗಳು!

10/04/2026 12:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮಾ.11 ರಿಂದ ರಾಜ್ಯಾದ್ಯಂತ ಸರ್ಕಾರಿ ‘OPD’ ಬಂದ್ : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವೈದ್ಯರಿಂದ ಪ್ರತಿಭಟನೆ!
KARNATAKA

BREAKING : ಮಾ.11 ರಿಂದ ರಾಜ್ಯಾದ್ಯಂತ ಸರ್ಕಾರಿ ‘OPD’ ಬಂದ್ : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವೈದ್ಯರಿಂದ ಪ್ರತಿಭಟನೆ!

By kannadanewsnow0524/02/2026 6:29 AM

ಬೆಂಗಳೂರು : ವರ್ಗಾವಣೆ ನೀತಿ ಬದಲಾವಣೆ, ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ವೈದ್ಯರು ಮಾರ್ಚ್ 11 ರಿಂದ 15 ರವರೆಗೆ ಹೊರ ರೋಗಿಗಳ (OPD) ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿ ಯಲ್ಲಿ ಈ ಕುರಿತು ಮಾಹಿತಿ ನೀಡಿದ ರಾಜ್ಯ ಸರ್ಕಾರಿ ವೈದ್ಯಾಧಿ ಕಾರಿಗಳ ಸಂಘದ ರಾಜ್ಯಾಧ್ಯಕ್ಷ ಡಾ.ರವೀಂದ್ರನಾಥ್ ಎಂ.ಮೇಟಿ ಅವರು, ರಾಜ್ಯ ಸರ್ಕಾರ ಪ್ರತಿಭಟನೆಗೆ ಸ್ಪಂದಿಸಿ ಬೇಡಿಕೆ ಗಳನ್ನು ಈಡೇರಿಸದಿದ್ದರೆ ಮಾರ್ಚ್ 16 ರಿಂದ ಆರೋಗ್ಯ ಇಲಾಖೆಯ ಎಲ್ಲಾ ವೈದ್ಯರು, ಅಧಿಕಾರಿ-ನೌಕರರು ಕರ್ತವ್ಯಕ್ಕೆ ಅನಿರ್ದಿಷ್ಟಾವ ಧಿವರೆಗೆ ಗೈರಾಗುವ ಮೂಲಕ ಮುಷ್ಕರ ಮುಂದುವರೆಸುತ್ತೇವೆ ಎಂದು ತಿಳಿಸಿದರು.

ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಉಂಟಾಗುತ್ತಿದ್ದು ಸಮರ್ಪ ಕವಾಗಿ ಔಷಧ ಸರಬರಾಜು ಮಾಡಬೇಕು. ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ತಿದ್ದುಪಡಿ ಮಾಡಬೇಕು. ಆದರೆ, ಸರ್ಕಾರಿ ಆದೇಶ ಉಲ್ಲಂಘಿಸಿ 1973ರಿಂದ ಇಲ್ಲಿಯವರೆಗೆ ಆರೋಗ್ಯ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಿಲ್ಲ. ಈ ಬಗ್ಗೆ ಶೀಘ್ರ ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು.

ಇಲಾಖೆಯ ಎಲ್ಲ ವೃಂದಗಳ ಜೇಷ್ಠತಾ ಪಟ್ಟಿಯನ್ನು ಕಾಲ ಕಾಲಕ್ಕೆ ಪ್ರಕಟಿಸಬೇಕು. ಗುತ್ತಿಗೆ ವೈದ್ಯರು, ನೌಕರರು ಹಾಗೂ ಎನ್ ಎಚ್‌ಎಂ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಮತ್ತು ಕಾಲಕಾಲಕ್ಕೆ ಸೂಕ್ತ ವೇತನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮತ್ತು ಆರೋಗ್ಯ ಇಲಾಖೆಯ ನೌಕರರ ಸಂಘಗಳು ಈ ಪ್ರತಿಭಟನೆಗೆ ಕರೆ ನೀಡಿವೆ. ಈ ಕುರಿತಾದ ಪ್ರಮುಖ ಮಾಹಿತಿಗಳು ಇಲ್ಲಿವೆ:

1. ಪ್ರತಿಭಟನೆಯ ಹಂತಗಳು

ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳು ಹಂತ-ಹಂತವಾಗಿ ಹೋರಾಟ ನಡೆಸಲು ನಿರ್ಧರಿಸಿದ್ದಾರೆ:

  • ಹಂತ 1 (ಮಾರ್ಚ್ 11 ರಿಂದ 15): ರಾಜ್ಯದ ಎಲ್ಲಾ ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡಲಿದ್ದಾರೆ. ಈ ಅವಧಿಯಲ್ಲಿ OPD (ಹೊರರೋಗಿ ಸೇವೆ) ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.

  • ಹಂತ 2 (ಮಾರ್ಚ್ 16 ರಿಂದ): ಒಂದು ವೇಳೆ ಸರ್ಕಾರ ಅಷ್ಟರೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ, ವೈದ್ಯರು ಕೆಲಸಕ್ಕೆ ಗೈರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಿದ್ದಾರೆ.

2. ವೈದ್ಯರ ಪ್ರಮುಖ ಬೇಡಿಕೆಗಳು

  • ಔಷಧಗಳ ಕೊರತೆ: ಸರ್ಕಾರಿ ಆಸ್ಪತ್ರೆಗಳಿಗೆ ನಿರಂತರವಾಗಿ ಮತ್ತು ಸಮರ್ಪಕವಾಗಿ ಔಷಧಗಳ ಪೂರೈಕೆಯಾಗಬೇಕು.

  • ಬಡ್ತಿ ಮತ್ತು ನೇಮಕಾತಿ: ಕಳೆದ 5 ವರ್ಷಗಳಿಂದ ಬಾಕಿ ಇರುವ ಬಡ್ತಿಗಳನ್ನು ನೀಡಬೇಕು ಮತ್ತು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು.

  • ವರ್ಗಾವಣೆ ನೀತಿ: ಪ್ರಸ್ತುತ ಇರುವ ವರ್ಗಾವಣೆ ನೀತಿಯಲ್ಲಿ ಬದಲಾವಣೆ ತರಬೇಕು.

  • ಇತರ ಬೇಡಿಕೆಗಳು: 7ನೇ ವೇತನ ಆಯೋಗದ ಶಿಫಾರಸುಗಳ ಜಾರಿ ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ನಿಯಮಗಳ ಸಡಿಲಿಕೆ.

3. ರೋಗಿಗಳಿಗೆ ಗಮನಿಸಬೇಕಾದ ಅಂಶ

  • ಮುಷ್ಕರದ ಸಮಯದಲ್ಲಿ ಕೇವಲ ತುರ್ತು ಚಿಕಿತ್ಸೆ (Emergency Services) ಮತ್ತು ಒಳರೋಗಿ ಸೇವೆಗಳು ಮಾತ್ರ ಲಭ್ಯವಿರುವ ಸಾಧ್ಯತೆಯಿದೆ.

  • ಸಾಮಾನ್ಯ ತಪಾಸಣೆಗಾಗಿ ಸರ್ಕಾರಿ ಆಸ್ಪತ್ರೆಗೆ ಹೋಗುವವರು ಮಾರ್ಚ್ 11 ರ ಮೊದಲು ಅಥವಾ ಪರಿಸ್ಥಿತಿ ತಿಳಿಯಾದ ನಂತರ ಹೋಗುವುದು ಉತ್ತಮ.

Share. Facebook Twitter LinkedIn WhatsApp Email

Related Posts

ಸರ್ಕಾರಿ ಸೌಲಭ್ಯ ಪಡೆಯಲು ಪೋಡಿ ಕಡ್ಡಾಯ: ರೈತರು ತಿಳಿಯಲೇಬೇಕಾದ ಪ್ರಮುಖ ವಿಚಾರಗಳಿವು.!

10/04/2026 1:04 PM2 Mins Read

BREAKING : ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಭಾರಿ ಎಡವಟ್ಟು : 600ಕ್ಕೆ 683 ಅಂಕ ನೀಡಿದ ಇಲಾಖೆ!

10/04/2026 12:58 PM1 Min Read

BIG NEWS : 1 ಲಕ್ಷ ಲಂಚ ಪಡೆದು ಪರಾರಿಗೆ ಯತ್ನ : ಸಿನೆಮಾ ಸ್ಟೈಲ್ ನಲ್ಲಿ ಚೇಸ್ ಮಾಡಿ ಬಲೆಗೆ ಕೆಡುವಿದ ಲೋಕಾಯುಕ್ತ ಅಧಿಕಾರಿಗಳು!

10/04/2026 12:48 PM1 Min Read
Recent News

ಸರ್ಕಾರಿ ಸೌಲಭ್ಯ ಪಡೆಯಲು ಪೋಡಿ ಕಡ್ಡಾಯ: ರೈತರು ತಿಳಿಯಲೇಬೇಕಾದ ಪ್ರಮುಖ ವಿಚಾರಗಳಿವು.!

10/04/2026 1:04 PM

BREAKING : ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಭಾರಿ ಎಡವಟ್ಟು : 600ಕ್ಕೆ 683 ಅಂಕ ನೀಡಿದ ಇಲಾಖೆ!

10/04/2026 12:58 PM

BIG NEWS : 1 ಲಕ್ಷ ಲಂಚ ಪಡೆದು ಪರಾರಿಗೆ ಯತ್ನ : ಸಿನೆಮಾ ಸ್ಟೈಲ್ ನಲ್ಲಿ ಚೇಸ್ ಮಾಡಿ ಬಲೆಗೆ ಕೆಡುವಿದ ಲೋಕಾಯುಕ್ತ ಅಧಿಕಾರಿಗಳು!

10/04/2026 12:48 PM

BREAKING : ರಾಜ್ಯಸಭಾ ಸದಸ್ಯರಾಗಿ `ನಿತೀಶ್ ಕುಮಾರ್’ ಪ್ರಮಾಣ ವಚನ ಸ್ವೀಕಾರ | WATCH VIDEO

10/04/2026 12:33 PM
State News
KARNATAKA

ಸರ್ಕಾರಿ ಸೌಲಭ್ಯ ಪಡೆಯಲು ಪೋಡಿ ಕಡ್ಡಾಯ: ರೈತರು ತಿಳಿಯಲೇಬೇಕಾದ ಪ್ರಮುಖ ವಿಚಾರಗಳಿವು.!

By kannadanewsnow5710/04/2026 1:04 PM KARNATAKA 2 Mins Read

ಬೆಂಗಳೂರು: ಗ್ರಾಮೀಣ ಭಾಗದ ರೈತರಲ್ಲಿ ‘ಪೋಡಿ’ ಎಂಬ ಪದ ಸದಾ ಚರ್ಚೆಯಲ್ಲಿರುತ್ತದೆ. ಆದರೆ ಅನೇಕರಿಗೆ ಪೋಡಿ ಎಂದರೆ ಏನು? ಅದನ್ನು…

BREAKING : ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಭಾರಿ ಎಡವಟ್ಟು : 600ಕ್ಕೆ 683 ಅಂಕ ನೀಡಿದ ಇಲಾಖೆ!

10/04/2026 12:58 PM

BIG NEWS : 1 ಲಕ್ಷ ಲಂಚ ಪಡೆದು ಪರಾರಿಗೆ ಯತ್ನ : ಸಿನೆಮಾ ಸ್ಟೈಲ್ ನಲ್ಲಿ ಚೇಸ್ ಮಾಡಿ ಬಲೆಗೆ ಕೆಡುವಿದ ಲೋಕಾಯುಕ್ತ ಅಧಿಕಾರಿಗಳು!

10/04/2026 12:48 PM

BREAKING : ಚಿಕ್ಕಮಗಳೂರಲ್ಲಿ ಟ್ರೆಕ್ಕಿಂಗ್ ವೇಳೆ ನಾಪತ್ತೆಯಾಗಿದ್ದ ಬಾಲಕಿ ಶ್ರೀನಂದ, 2 ಸಾವಿರ ಅಡಿ ಕೆಳಗೆ ಶವವಾಗಿ ಪತ್ತೆ!

10/04/2026 12:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.