ಬೆಂಗಳೂರು : ರಾಜ್ಯದಲ್ಲಿ ಸೆಪ್ಟೆಂಬರ್ 22ರಿಂದ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಲಿದ್ದು ಇದೇ ವಿಚಾರವಾಗಿ, ಕ್ರಿಶ್ಚಿಯನ್ ಕಾಲಂನಲ್ಲಿ ಕುರುಬ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್ ಸೇರಿದಂತೆ ಜೋಡಿತ ಜಾತಿಗಳನ್ನು ಕ್ರಿಶ್ಚಿಯನ್ ಕಾಲಂ ಪಟ್ಟಿಯಿಂದ ತೆಗೆದುಹಾಕುವಂತೆ ಹಿಂದುಳಿದ ವರ್ಗಗಳ ಆಯೋಗಕ್ಕೆ ರಾಜ್ಯ ಸರ್ಕಾರ ಇದೀಗ ಸೂಚನೆ ನೀಡಿದೆ.
ಹೌದು ಕ್ರಿಶ್ಚಿಯನ ಜೊತೆ ಜೋಡಿತ ಜಾತಿಗಳಿಗೆ ಜಾತಿ ಪಟ್ಟಿಯಿಂದ ಕೊನೆಗೂ ಕೊಕ್ ಬಿದ್ದಿದೆ. ಜಾತಿ ಕಾಲಂ ಪಟ್ಟಿಯಿಂದ ತೆಗೆದುಹಾಕುವಂತೆ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ಒಂದು ಸಲಹೆ ನೀಡಿದೆ. ಸಮೀಕ್ಷೆ ವೇಳೆ ಕ್ರಿಶ್ಚಿಯನ್ ಧರ್ಮ ಸಂಬಂಧ ಎರಡು ಕಾಲಂ ರಚಿಸುವ ಆಯೋಗ, ಕ್ರಿಶ್ಚಿಯನ್ ಮತ್ತು ಮತಾಂತರ ಕ್ರಿಶ್ಚಿಯನ್ ಎರಡು ಕಾಲಂ ಮಾತ್ರ ಅಳವಡಿಕೆ, ಮಾಡಿದ್ದು, ಒಕ್ಕಲಿಗ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಕುರುಬ-ಕ್ರಿಶ್ಚಿಯನ್ ಈ ರೀತಿಯ 47 ಜಾತಿ ಕಾಲಂ ತೆಗೆಯುವುದು ಹಾಕುವಂತೆ ರಾಜ್ಯ ಸರ್ಕಾರ ಹಿಂದುಳಿದ ವರ್ಗದ ಆಯೋಗಕ್ಕೆ ಸೂಚನೆ ನೀಡಿದೆ.ಸರಕಾರದ ಸಲಹೆಯನ್ನು ಹಿಂದುಳಿದ ವರ್ಗಗಳ ಆಯೋಗ ಸ್ವೀಕರಿಸಿದೆ.