ರಾಯಚೂರು : ನಗರದ ಎಲ್ ಬಿ ಎಸ್ ನಗರದಲ್ಲಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಅವಧಿ ಇರುವ ಔಷಧಿಗಳನ್ನು ತಿಪ್ಪೆಯಲ್ಲಿ ಬಿಸಾಡಿ ಹೋಗಿರುವ ಘಟನೆ ವರದಿಯಾಗಿದೆ. ಹೌದು ರಾಯಚೂರಿನಲ್ಲಿ ಸರ್ಕಾರಿ ಆಸ್ಪತ್ರೆಯ ಔಷಧಿಗಳು ತಿಪ್ಪೆ ಸೇರಿವೆ.
ಅವಧಿ ಇರುವ ಔಷಧಿಗಳನ್ನು ಸಿಬ್ಬಂದಿಗಳು ತಿಪ್ಪೆಗೆ ಬಿಸಾಡಿದ್ದಾರೆ. ತಿಪ್ಪೆಯಲ್ಲಿನ ಸರ್ಕಾರಿ ಔಷಧಗಳು ಕಂಡು ಸ್ಥಳೀಯರು ಶಾಕ್ ಆಗಿದ್ದಾರೆ. ಅವಧಿ ಇರುವ ಲಕ್ಷಾಂತರ ರೂಪಾಯಿ ಮೌಲ್ಯದ ವಿವಿಧ ಬಗೆಯ ಸಿರಪ್ ಗಳು ಕಂಡು ಬಂದಿವೆ. ರಾಯಚೂರಿನ ಎಲ್ ಬಿ ಎಸ್ ನಗರದ ಸ್ಮಶಾನದ ಬಳಿಯ ತಿಪ್ಪೆಯಲ್ಲಿ ಪತ್ತೆಯಾಗಿದೆ. ಕ್ರಮಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.








