ಬೆಂಗಳೂರು : ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಕಚೇರಿ ನಿವಾಸದ ಬಳಿ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನ ರಸ್ತೆ ಬದಿಯ ಡಿವೈಡರ್ ಏರಿದ ಘಟನೆ ನಡೆದಿದೆ.
ಅಂಚೆ ಇಲಾಖೆಗೆ ಸೇರಿದ ಗೂಡ್ಸ್ ವಾಹನ ಅಪಘಾತಕ್ಕೆ ಈಡಾಗಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ರೀತಿಯ ಪ್ರಾಣಪಾಯ ಸಂಭವಿಸಿಲ್ಲ. ತಕ್ಷಣ ಅಲ್ಲಿಗೆ ಸಂಚಾರಿ ಠಾಣೆ ಪೋಲೀಸರು ಭೇಟಿ ನೀಡಿ ಗೂಡ್ಸ್ ವಾಹನ ತೆರವುಗೊಳಿಸಿದರು. ಘಟನೆಯ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.