ಬೆಂಗಳೂರು : ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಎರಡು ತಿಂಗಳ ಗೃಹಲಕ್ಷ್ಮಿ ಹಣ ಮಹಿಳೆಯರ ಖಾತೆಗೆ ಜಮೆ ಆಗದಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ವಿಪಕ್ಷ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಹ ಹೌದು ಎರಡು ತಿಂಗಳ ಹಣ ಮಹಿಳೆಯರ ಖಾತೆಗೆ ಜಮೆ ಆಗಿಲ್ಲ ಎಂದು ಸತ್ಯವನ್ನು ಒಪ್ಪಿಕೊಂಡು ವಿಷಾದ ವ್ಯಕ್ತಪಡಿಸಿದ್ದಾರೆ.
ಹೌದು ರಾಜ್ಯದಲ್ಲಿ ನಡೆಯುತ್ತಿದ್ದ ʻಗೃಹಲಕ್ಷ್ಮಿʼ ಜಟಾಪಟಿಗೆ ತಾತ್ಕಾಲಿಕ ತೆರೆ ಬಿದ್ದಂತೆ ಕಾಣ್ತಿದೆ. ಇದೆ ವಿಚಾರವಾಗಿ ಇದೀಗ ರಾಜ್ಯ ಸರ್ಕಾರ ಕೊನೆಗೂ ಒಂದು ಕಂತಿನ ಹಣ ಬಿಡುಗಡೆ ಮಾಡಿದೆ. ಹೊಸವರ್ಷಕ್ಕೂ ಮುನ್ನವೇ ಈ ಹಣ ಮನೆ ಯಜಮಾನಿಯರ ಕೈ ಸೇರಲಿದೆ. 2-3 ತಿಂಗಳಿಗೊಮ್ಮೆ ಮಾತ್ರ ಗೃಹಲಕ್ಷ್ಮಿ ದುಡ್ಡು ಆಕೌಂಟ್ ಬೀಳ್ತಾ ಇತ್ತು. ಫೆಬ್ರವರಿ ಮಾರ್ಚ್ ದುಡ್ಡು ಎಲ್ಲಿ ಹೋಯ್ತು ಗೊತ್ತಿಲ್ಲ.ಆದರೆ ಕೊನೆಗೂ ಸೆಪ್ಟೆಂಬರ್ ಕಂತಿನ ಹಣವನ್ನ ಬಿಡುಗೆ ಮಾಡಲಾಗಿದೆ.
ಡಿಸೆಂಬರ್ 16ರಂದೇ ಆರ್ಥಿಕ ಇಲಾಖೆಯಿಂದ ಸೆಪ್ಟೆಂಬರ್ ಕಂತಿನ ಹಣ ಬಿಡುಗಡೆ ಆಗಿದ್ದು, ಹೊಸ ವರ್ಷಕ್ಕೂ ಮುನ್ನವೇ ಗೃಹಲಕ್ಷ್ಮಿಯರ ಖಾತೆಗೆ ಹಣ ಜಮೆಯಾಗುವ ಸಾಧ್ಯತೆಯಿದೆ.ಇನ್ನೂ ಅಕ್ಟೋಬರ್, ನವೆಂಬರ್, ಡಿಸೆಂಬರ್ ದುಡ್ಡು ಅದ್ಯಾವಾಗ ರಿಲೀಸ್ ಆಗುತ್ತೋ ಗೊತ್ತಿಲ್ಲ. ಆದ್ರೇ ಇನ್ನೊಂದು ವಾರದಲ್ಲಿ ಸೆಪ್ಟೆಂಬರ್ ಕಂತಿನ ಹಣ ಡಿಬಿಟಿ ಮೂಲಕ ಪ್ರತಿ ಮನೆ ಯಜಮಾನಿ ಖಾತೆಗೆ ಜಮೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.








