ಬೆಂಗಳೂರು : ಪಿ ಡಿ ಎಸ್ ಪಡಿತರ ವಿತರಕರ ಬಹುಕಾಲದ ಬೇಡಿಕೆಯನ್ನು ಇದೀಗ ರಾಜ್ಯ ಸರ್ಕಾರ ಈಡೇರಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ,ಫಲಾನುಭವಿಗಳಿಗೆ ನೀಡುವ ಒಂದು ಕೆಜಿ ಅಕ್ಕಿಯ ಪಿಡಿಎಸ್ ವಿತರಕರ ಕಮಿಷನ್ ಮೊತ್ತವನ್ನು 1.24 ರೂಪಾಯಿಯಿಂದ 1.5 ರೂಪಾಯಿಗೆ ಹೆಚ್ಚಿಸುವುದಾಗಿ ಗುರುವಾರ ಘೋಷಿಸಿದ್ದಾರೆ.
ಜನಾರ್ಧನ್ ರೆಡ್ಡಿ ‘ಬಿಜೆಪಿ’ಗೆ ಮರಳಿದರೆ ‘ಲೋಕಸಭಾ ಚುನಾವಣೆ’ಯಲ್ಲಿ ಒಗ್ಗಟ್ಟಿನಿಂದ ಹೋರಾಟ : ಶ್ರೀ ರಾಮುಲು
ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅನ್ನಭಾಗ್ಯ ಯೋಜನೆಯ 10 ವರ್ಷಗಳ ಸಂಭ್ರಮಾಚರಣೆಯ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ವಿತರಕರ ಬಹುಕಾಲದ ಬೇಡಿಕೆಯಾಗಿರುವ ಈ ಘೋಷಣೆಯನ್ನು ಮಾಡಿದರು.
BREAKING : ಉತ್ತರಪ್ರದೇಶ : ‘ವಾಟ್ಸಪ್’ ನಲ್ಲಿ 12ನೇ ತರಗತಿ ‘ಬೋರ್ಡ್’ ಪರೀಕ್ಷೆಯ ಪ್ರಶ್ನೆಪತ್ರಿಕೆ ‘ಸೋರಿಕೆ’
ಬಸವೇಶ್ವರರು ಪ್ರಚಾರ ಮಾಡಿದ ಅನ್ನ ದಾಸೋಹದ ಪರಿಕಲ್ಪನೆಯಿಂದ ಈ ಯೋಜನೆಯು ಪ್ರೇರಿತವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿಯನ್ನು ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಹೀಗಾಗಿ ನಾವು ಫಲಾನುಭವಿಗಳಿಗೆ ಐದು ಕೆಜಿ ಹೆಚ್ಚುವರಿ ಅಕ್ಕಿಯ ಹಣ ನೀಡುತ್ತಿದ್ದೇವೆ. ನೀವು ಮತ ಹಾಕಿದಾಗ ಬಡವರ ಪರವಾಗಿ ಯಾರು ಇದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಿ ಎಂದರು.
ಪ್ರಧಾನಿ ಮೋದಿ ಭೇಟಿ ಮಾಡಿದ ಬಿಲ್ ಗೇಟ್ಸ್: ಸಾರ್ವಜನಿಕ ಒಳಿತಿಗಾಗಿ AI ಕುರಿತು ಚರ್ಚೆ