ಬೆಂಗಳೂರು : ಬೆಂಗಳೂರಿನ ಜನತೆಗೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಇದೀಗ ಮತ್ತೊಂದು ಸಿಹಿ ಸುದ್ದಿ ನೀಡಿದ್ದು, ದಿನದ ಪಾಸ್ 3 ದಿನದ ಪಾಸ್ ಮತ್ತು 5 ದಿನದ ಪಾಸ್ ಗಳು ಪರಿಚಯಿಸಿದೆ. ಅನಿಯಮಿತ ಪ್ರಯಾಣ ಪಾಸ್ ಪರಿಚಯಿಸಿದ ‘BMRCL’ ಜನವರಿ 15 ರಿಂದ ಮೆಟ್ರೋದಲ್ಲಿ ಕ್ಯೂ ಆರ್ ಪಪಾಸ್ ಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಹೌದು ಡಿಜಿಟಲ್ ಟಿಕೆಟ್ ವ್ಯವಸ್ಥೆ ಉತ್ತೇಜಿಸಲು ಬಿಎಮ್ಆರ್ಸಿಎಲ್ ಈ ಒಂದು ಕ್ರಮ ಕೈಗೊಂಡಿದೆ. ಜನವರಿ 15 ರಿಂದ ಮೆಟ್ರೋದಲ್ಲಿ QR ಪಾಸ್ ಗಳ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮೊಬೈಲಲ್ಲಿ ಕ್ಯೂಆರ್ ಕೋಡ್ ಬಳಸಿ ಪಾಸ್ ಪಡೆಯಬಹುದು. ಪಾಸ್ ಪಡೆಯಲು ಯಾವುದೇ ರೀತಿಯ ಭದ್ರತಾ ಠೇವಣಿ ಇರುವುದಿಲ್ಲ. ಒಂದು ದಿನದ ಪಾಸಿಗೆ ರೂ.250 ಮೂರು ದಿನಗಳ ಪಾಸಿಗೆ 550 ರೂಪಾಯಿ ಐದು ದಿನಗಳ ಪಾಸಿಗೆ 850 ರೂಪಾಯಿಯನ್ನು ಬಿಎಂಆರ್‌ಸಿಎಲ್ ದರ ನಿಗದಿಗೊಳಿಸಿದೆ. ಈ ಕುರಿತು ಬಿಎಮ್ಆರ್‌ಸಿಎಲ್ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ದಿನಾಂಕ 15ನೇ ಜನವರಿ 2026 ರಿಂದ ಬಿ.ಎಂ.ಆರ್.ಸಿ.ಎಲ್ ಮೊಬೈಲ್ ಕ್ಯೂಆರ್ (QR) ಆಧಾರಿತ 1, 3 ಮತ್ತು 5 ದಿನಗಳ ಅನಿಯಮಿತ ಪ್ರಯಾಣದ ಪಾಸ್ ಪರಿಚಯ ಹೆಚ್ಚಿನ ವಿವರಗಳಿಗೆ ಮಾಧ್ಯಮ ಪ್ರಕಟಣೆಯನ್ನು ಪರಿಶೀಲಿಸಿ.
BMRCL Launches Mobile QR-based 1-Day, 3-Day & 5-Day Unlimited Travel Passes. pic.twitter.com/76PN4j9u9f
— ನಮ್ಮ ಮೆಟ್ರೋ (@OfficialBMRCL) January 13, 2026








