ಬೆಂಗಳೂರು : ಇದೇ ಜನವರಿ 26ರಂದು ಗಣರಾಜ್ಯೋತ್ಸವ ದಿನದಂದು ನಮ್ಮ ಮೆಟ್ರೋ ರೈಲುಗಳು ಹೆಚ್ಚುವರಿಯಾಗಿ ಸಂಚರಿಸಲಿವೆ. ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಹೆಚ್ಚುವರಿ ರೈಲುಗಳು ಸಂಚರಿಸಲಿವೆ ಎಂದು ಈ ಕುರಿತು BMRCL ಮಾಹಿತಿ ನೀಡಿದೆ.
ಭಾನುವಾರ ಬೆಳಿಗ್ಗೆ 7ರ ಬದಲು 6 ಗಂಟೆಯಿಂದ ಮೆಟ್ರೋ ಸಂಚಾರ ಆರಂಭವಾಗಲಿದೆ. ಲಾಲ್ ಬಾಗ್ ನಲ್ಲಿ ಫ್ಲವರ್ ಶೋ, ಹಾಗೂ ಮಾದವಾರದ BIEC ಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಈ ಕಾರ್ಯಕ್ರಮಗಳಿಗೆ ತೆರಳುವವರಿಗೆ ಅನುಕೂಲವಾಗಲು ಹೆಚ್ಚುವರಿ ರೈಲು ಸಂಚರೀಸಲಿವೆ. ನಮ್ಮ ಮೆಟ್ರೋದ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಹೆಚ್ಚುವರಿ ರೈಲುಗಳು ಸಂಚಾರ ನಡೆಸಲಿವೆ.
ಲಾಲ್ ಬಾಗ್ ಮೆಟ್ರೋ ನಿಲ್ದಾಣದಲ್ಲಿ ಟೋಕನ್ ಬದಲು ಪೇಪರ್ ಟಿಕೆಟ್ ವಿತರಿಸಲಾಗುತ್ತದೆ.ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ಪೇಪರ್ ಟಿಕೆಟ್ ವಿತರಿಸಲಾಗುತ್ತದೆ. ಫ್ಲ್ಯಾಟ್ ರೂ.30 ಯಂತೆ ಮೆಟ್ರೋದಲ್ಲಿ ಪೇಪರ್ ಟಿಕೆಟ್ ವಿತರಣೆ ಮಾಡಲಾಗುತ್ತದೆ.ಲಾಲ್ ಬಾಗ್ ನಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.ಈ ವೇಳೆ ಲಾಲ್ಬಾಗ್ನಲ್ಲಿ ಟೋಕನ್ ನೀಡದಿರಲು ತೀರ್ಮಾನಿಸಲಾಗಿದ್ದು, ಹೆಚ್ಚುವರಿ ಮೆಟ್ರೋ ರೈಲುಗಳ ಸಂಚಾರದ ಬಗ್ಗೆ BMRCL ಮಾಹಿತಿ ನೀಡಿದೆ.