ನವದೆಹಲಿ : ಇಸ್ರೇಲ್-ಇರಾನ್ ಕದನದ ವಿರಾಮದ ಬೆನ್ನಲ್ಲೇ ಆಭರಣ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.
ಹೌದು, ಇಸ್ರೇಲ್-ಇರಾನ್ ನಡುವೆ ಕದನ ವಿರಾಮದ ಬೆನ್ನಲ್ಲೇ ಶುದ್ಧ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 930 ರೂ. ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 97,670 ರೂ. ತಲುಪಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕೊಂಚ ತಗ್ಗಿದ್ದು, ದೇಶಿಯ ಮಾರುಕಟ್ಟೆಯಲ್ಲಿಯೂ ಚಿನ್ನದ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಶುದ್ಧ ಚಿನ್ನದ ದರ 10 ಗ್ರಾಂಗೆ 930 ಇಳಿಕೆಯಾಗಿ 97,670 ರೂ.ಗೆ ತಲುಪಿದೆ. ಆಭರಣ ಚಿನ್ನದ ದರ 10 ಗ್ರಾಂಗೆ 850 ರೂ. ಇಳಿಕೆಯಾಗಿ, 97,200 ರೂ.ಗೆ ಇದೆ.
ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ದರ 930 ರೂಪಾಯಿ ಕಡಿಮೆಯಾಗಿದ್ದು, 98,020 ರೂ.ಗೆ ಮಾರಾಟವಾಗಿದೆ. 10 ಗ್ರಾಂ ತೂಕದ 22 ಕ್ಯಾರೆಟ್ ತೂಕದ 850 ರೂ. ಕಡಿಮೆಯಾಗಿದ್ದು, 89,850 ರೂ.ಗೆ ಮಾರಾಟವಾಗಿದೆ.
ಬೆಳ್ಳಿ ಬೆಲೆಯೂ ಕಡಿಮೆಯಾಗಿದ್ದು, 1 ಕೆಜಿ ಬೆಳ್ಳಿ ದರ 100 ರೂಪಾಯಿ ಕಡಿಮೆಯಾಗಿದ್ದು, 1,03,000 ರೂ.ಗೆ ಮಾರಾಟವಾಗಿದೆ.