ನವದೆಹಲಿ : 2025 ರ ಹೊಸ ವರ್ಷದ ಹೊತ್ತಲ್ಲೇ ಆಭರಣ ಪ್ರಿಯರಿಗೆ ಸಿಹಿಸುದ್ದಿ ಸಿಕ್ಕಿದ್ದು, ಜನವರಿ 1 ರ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ವರ್ಷದ ಮೊದಲ ದಿನವಾದ ಇಂದು ಚಿನ್ನದ ಬೆಲೆ ಕೊಂಚ ನೆಮ್ಮದಿ ನೀಡಿದೆ. ಜನವರಿ 1, 2025 ರಂದು ಚಿನ್ನದ ಬೆಲೆ 450 ರೂಪಾಯಿಗಳಷ್ಟು ಕಡಿಮೆಯಾಗಿದೆ.
ನಿನ್ನೆ, ಮಂಗಳವಾರ, ಡಿಸೆಂಬರ್ 31, 2024 ಕ್ಕೆ ಹೋಲಿಸಿದರೆ ಬುಧವಾರದಂದು ಚಿನ್ನದ ಬೆಲೆ ಕಡಿಮೆಯಾಗಿದೆ. ದೇಶದ ಬಹುತೇಕ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ದರ 77,600 ರೂ. 22 ಕ್ಯಾರೆಟ್ ಚಿನ್ನದ ಬೆಲೆ ಸುಮಾರು 71,200 ರೂ. ಇದೆ. ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದ್ದು, ದೇಶದಲ್ಲಿ ಒಂದು ಕಿಲೋಗ್ರಾಂ ಬೆಳ್ಳಿಯ ಬೆಲೆ 90,500 ರೂ. ನಿನ್ನೆ ಬೆಳ್ಳಿಯ ಬೆಲೆ 92,500 ರೂ. ಹೊಸ ವರ್ಷದ ದಿನದಂದು ಬೆಳ್ಳಿ ಕೆಜಿಗೆ 2,000 ರೂ. ಇಳಿಕೆಯಾಗಿದೆ.
ಇದು ಜನವರಿ 1, 2025 ರ ಚಿನ್ನದ ದರವಾಗಿದೆ