ಬೆಂಗಳೂರು : ಬೆಂಗಳೂರಿನಲ್ಲ ಸತ್ಯನಾರಾಯಣ ಪೂಜೆಗೆ ಮನೆಗೆ ಬಂದಿದ್ದ ಅರ್ಚಕರೊಬ್ಬರು ಚಿನ್ನ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮುನೇಶ್ವರಸ್ವಾಮಿ ದೇವಸ್ಥಾನದ ಅರ್ಚಕ ರಮೇಶ್ ಶಾಸ್ತ್ರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ರಮೇಶ್ ಶಾಸ್ತ್ರಿ ದೇವರಿಗೆ ಹಾಕಿದ್ದ 44 ಗ್ರಾಂ ಚಿನ್ನದ ಸರ ಕಳ್ಳತನ ಮಾಡಿದ್ದು, ಈ ಸಂಬಂಧ ಅರ್ಚಕ ರಮೇಶ್ ವಿರುದ್ಧ ದಂಪತಿ ದೂರು ನೀಡಿದ್ದರು. ಪೊಲೀಸರ ತನಿಖೆ ವೇಳೆ ಅರ್ಚಕನ ಗೋವಾ ಕೆಸಿನೋ ಪ್ಲ್ಯಾನ್ ಬಯಲಿಗೆ ಬಂದಿದೆ. ಮುತ್ತೂಡ್ ನಲ್ಲಿ ಚಿನ್ನದ ಸರ ಗಿರವಿ ಇಟ್ಟು ರಮೇಶ್ ಹಣ ಪಡೆದಿದ್ದ. ಬಳಿಕ ಗೋವಾ ಕೆಸಿನೋದಲ್ಲಿ ಹಣ ಕಳೆದುಕೊಂಡಿದ್ದ. ಪ್ರಕರಣ ಸಂಬಂಧ ಇದೀಗ ಅರ್ಚಕ ರಮೇಶ್ ಶಾಸ್ತ್ರಿಯನ್ನು ಮಾಗಡಿ ರೋಡ್ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.