ಬೆಂಗಳೂರು : ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ನಟಿ ರನ್ಯಾ ರಾವ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮೂರನೇ ಆರೋಪಿಯನ್ನು ಅರೆಸ್ಟ್ ಮಾಡಿದ್ದು ಡಿ ಆರ್ ಐ ಅಧಿಕಾರಿಗಳು ಮೂರನೇ ಆರೋಪಿಯಾಗಿರುವ ಬಳ್ಳಾರಿ ಮೂಲದ ಸಾಹಿಲ್ ನನ್ನು ವಿಚಾರಣೆಗೆ ಒಳಪಡಿಸಿದಾಗ ಸ್ಪೋಟಕವಾದ ಮಾಹಿತಿ ಬಾಯ್ಬಿಟ್ಟಿದ್ದಾನೆ.
ಹೌದು ಡಿ ಆರ್ ಐ ಎದುರು ಮೂರನೇ ಆರೋಪಿ ಸಾಹಿಲ್ ಶಾಕಿಂಗ್ ವಿಚಾರ ಬಿಚ್ಚಿಟ್ಟಿದ್ದಾನೆ. ಪ್ರಕರಣದ ಮೂರನೇ ಆರೋಪಿ ಆಗಿರುವ ಸಾಹಿಲ್ ರನ್ಯಾರಾವ್ ಕಳೆದ ಮೂರೇ ಮೂರು ತಿಂಗಳಲ್ಲಿ ದುಬೈ ನಿಂದ 49.6 ಕೆಜಿ ಚಿನ್ನ ತಂದಿದ್ದಾಳೆ ಎಂದು ಡಿ ಆರ್ ಐ ಅಧಿಕಾರಿಗಳ ಮುಂದೆ ಬಾಯಿ ಬಿಟ್ಟಿದ್ದಾನೆ. ಮೂರೇ ತಿಂಗಳಲ್ಲಿ ಬರೋಬ್ಬರಿ 49.6 ಕೆ.ಜಿನ ಸಾಗಾಟ ಮಾಡಲಾಗಿದ್ದು ಬೆಂಗಳೂರಿಗೆ ರನ್ಯಾರಾವ್ 49.6 ಕೆಜಿ ಚಿನ್ನ ಸಾಗಿಸಿದ್ದಾಳೆ.
ನವೆಂಬರ್ ನಿಂದಲೇ 49.6 ಕೆಜಿ ಚಿನ್ನ ಸಾಧಿಸಿದ್ದಾಳೆ ದುಬೈ ನಿಂದ ಚಿನ್ನ ತಂದು ಕನ್ಯಾ ರಾವ್ 3ನೇ ಆರೋಪಿ ಸಾಹಿಲ್ ಗೆ ನೀಡಿದ್ದಾಳೆ ಮಾರಾಟ ಮಾಡುತ್ತಿದ್ದ. ಅಲ್ಲದೇ ಹವಾಲ ಮೂಲಕ ಸಾಹಿಲ್ 30 ಕೋಟಿ ಹಣ ದುಬೈ ಸಾಗಿಸಿದ್ದ. ಚಿನ್ನ ಖರೀದಿಗಾಗಿ ಹವಾಲಾ ಮೂಲಕ ಸುಮಾರು 30 ಕೋಟಿ ಹಣವನ್ನು ಸಾಹಿಲ್ ಸಾಗಾಟ ಮಾಡಿದ್ದ. ಹವಾಲ ವಹಿವಾಟಿನಲ್ಲಿ ಕೂಡ ರನ್ಯಾರಾವ್ ಭಾಗಿಯಾಗಿದ್ದಳು ಎನ್ನಲಾಗಿದೆ.