ಬೆಂಗಳೂರು : ದುಬೈ ನಿಂದ ಸುಮಾರು 14 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ನಟಿ ರನ್ಯರಾವ್ ಸೇರಿದಂತೆ ತರುಣ್ ರಾಜ್ ಹಾಗೂ ಸಾಹಿಲ್ ಜೈನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಇದೀಗ ಅಕ್ರಮ ಬಂಧನವೆಂದು ಬಿಡುಗಡೆ ಕೋರಿ ಮೂವರು ಹೇಬಿಎಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು ಇದೀಗ ಹೈಕೋರ್ಟ್ ಈ ಒಂದು ಅರ್ಜಿಯನ್ನು ವಜಾಗೊಳಿಸಿದೆ.
ಹೌದು ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿ ರನ್ಯ ರಾವ್ ಗೆ ಸದ್ಯಕ್ಕೆ ರಿಲೀಫ್ ಇಲ್ಲ. ನಟಿ ರನ್ಯಾರಾವ್ ತರುಣ್ ರಾಜ ಹಾಗೂ ಸಾಹಿಲ್ ಜೈನ್ ಅಕ್ರಮ ಬಂಧನವೆಂದು ಬಿಡುಗಡೆ ಕೋರಿ ಹೇಬಿಎಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು ಆದರೆ ನ್ಯಾಯಮೂರ್ತಿಗಳಾದ ಅನು ಶಿವರಾಮನ್, ವಿಜಯಕುಮಾರ್ ಪಾಟೀಲ್ ಅವರಿದ್ದ ಪೀಠ ಮೂವರು ಆರೋಪಿಗಳ ಅರ್ಜಿಯನ್ನು ವಜಗೊಳಿಸಿ ಆದೇಶ ಹೊರಡಿಸಿದ್ದಾರೆ.








