ಬೆಂಗಳೂರು : ದುಬೈ ನಿಂದ ಅಕ್ರಮವಾಗಿ 12 ಕೋಟಿ ಮೌಲ್ಯದ 14 ಕೆಜಿಗೂ ಅಧಿಕ ಚಿನ್ನ ಸಾಗಾಟ ಮಾಡಿದ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟಿ ರನ್ಯಾ ರಾವ್ ಗೆ ಇದೀಗ ಬಿಗ್ ರಿಲೀಫ್ ಸಿಕ್ಕಿದೆ. ಕೋರ್ಟ್ ಇದೀಗ ನಟಿ ರನ್ಯಾ ರಾವ್ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಹೌದು ದುಬೈ ನಿಂದ ರನ್ಯಾ ರಾವ್ 12 ಕೋಟಿ ಮೌಲ್ಯದ ಸುಮಾರು 14 ಕೆಜಿ ಚಿನ್ನವನ್ನು ಅಕ್ರಮವಾಗಿ ತಂದಿದ್ದರು ಈ ವೇಳೆ ಖಚಿತ ಮಾಹಿತಿಯ ಮೇರೆಗೆ ಡಿ ಆರ್ ಐ ಅಧಿಕಾರಿಗಳು ಅವರನ್ನು ಅರೆಸ್ಟ್ ಮಾಡಿದ್ದರು. ಇದೀಗ ಇಂದು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ನಟಿ ರನ್ಯಾರಾವ್ ಸೇರಿದಂತೆ ಮೂವರು ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ನೀಡಿದೆ.
ಜಾಮೀನು ಸಿಕ್ಕರೂ ಬಿಡುಗಡೆ ಇಲ್ಲ!
ಹೌದು ನಟಿ ರಮ್ಯಾಗೆ ಕೋರ್ಟ್ ಇಂದ ಜಾಮೀನು ಸಿಕ್ಕರು ಸದ್ಯಕ್ಕೆ ಬಿಡುಗಡೆ ಇಲ್ಲ. ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಜಾಮೀನು ಸಿಕ್ಕರು ನಟಿ ರನ್ಯಾರಾವ್ ಗೆ ಬಿಡುಗಡೆ ಇಲ್ಲ. ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ರನ್ಯಾಗೆ ಜಾಮೀನು ನೀಡಿತ್ತು. ಕಾಫಿಪೊಸ ಅಡಿ ಬಂಧಿತರಾಗಿರುವುದರಿಂದ ಸದ್ಯಕ್ಕೆ ಬಿಡುಗಡೆ ಇಲ್ಲ.
ನಟಿ ರನ್ ರಾವ್ ತಾಯಿಯಿಂದ ಹೈಕೋರ್ಟಿಗೆ ಹೆಬಿಎಸ್ ಕಾರ್ಪಸ್ ಕಾಫಿಪೊಸ ಅಡಿ ರನ್ಯಾ ಬಂಧನ ಕಾನೂನುಬಾಹಿರವೆಂದು ಘೋಷಿಸಲು ಮನವಿ ಮಾಡಿದ್ದಾರೆ. ರನ್ಯಾ ರಾವ್ ತಾಯಿ ಎಚ್‌ಪಿ ರೋಹಿಣಿ ಬಿಡುಗಡೆ ಕೋರಿದ್ದಾರೆ. ಕಾಫಿ ಪೋಷ ಅಡಿ ಬಂದಿಸುವಾಗ ಪ್ರಕ್ರಿಯೆ ಪಾಲಿಸಿಲ್ಲವೆಂದು ವಾದ ಮಂಡಿಸಿದ್ದಾರೆ.ರನ್ಯಾ ಪರ ವಕೀಲರ ವಾದಕ್ಕೆ ಡಿಎಸ್‌ಜಿ ಶಾಂತಿಭೂಷಣ ಆಕ್ಷೇಪ ವ್ಯಕ್ತಪಡಿಸಿದರು. ಲಿಖಿತ ಆಕ್ಷೇಪಣೆ ಸಲ್ಲಿಸಲು ನಾಲ್ಕು ವಾರಗಳ ಕಾಲ ಕಾಲಾವಕಾಶಕ್ಕೆ ಮನವಿ ಮಾಡಿದರು ಈ ವೇಳೆ ಹೈಕೋರ್ಟ್ ವಿಭಾಗೀಯ ಪೀಠ ಜೂನ್ 3ಕ್ಕೆ ವಿಚಾರಣೆ ಮುಂದೂಡಿದರು.