Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಡೊನಾಲ್ಡ್ ಟ್ರಂಪ್ ಚೀನಾ ಪ್ರವಾಸ: ಮೇ 14ಕ್ಕೆ ಷಿ ಜಿನ್‌ಪಿಂಗ್-ಟ್ರಂಪ್ ಮಹತ್ವದ ಭೇಟಿ!

Vijay 5

ತಮಿಳುನಾಡು ವಿಧಾನಸಭೆಯಲ್ಲಿ ನಾಳೆ ಅಗ್ನಿಪರೀಕ್ಷೆ: ವಿಶ್ವಾಸಮತಕ್ಕೂ ಮುನ್ನ ಎಐಎಡಿಎಂಕೆ ಬಂಡಾಯ ಶಾಸಕರೊಂದಿಗೆ ಸಿಎಂ ವಿಜಯ್ ಮಹತ್ವದ ಸಭೆ!

ಜನರಿಗೆ ಚಿನ್ನ ಖರೀದಿಸಬೇಡಿ ಎಂದು ಹೇಳಿದ ಮೊದಲ ನಾಯಕ ಪ್ರಧಾನಿ ಮೋದಿ ಮಾತ್ರ ಅಲ್ಲ : ಸರ್ಕಾರಗಳು ಇಂತಹ ಮನವಿಗಳನ್ನು ಯಾಕೆ ಮಾಡುತ್ತವೆ ಎಂಬುದು ಇಲ್ಲಿದೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ದಾವಣಗೆರೆಯಲ್ಲಿ ವ್ಯಾಪಾರಿ ಬಳಿ ಚಿನ್ನ ದರೋಡೆ : ಇಬ್ಬರು ‘PSI’ ಸೇರಿದಂತೆ ನಾಲ್ವರು ಅರೆಸ್ಟ್!
KARNATAKA

BREAKING : ದಾವಣಗೆರೆಯಲ್ಲಿ ವ್ಯಾಪಾರಿ ಬಳಿ ಚಿನ್ನ ದರೋಡೆ : ಇಬ್ಬರು ‘PSI’ ಸೇರಿದಂತೆ ನಾಲ್ವರು ಅರೆಸ್ಟ್!

By ಸುರೇಶ್‌

ದಾವಣಗೆರೆ : ರಾಜ್ಯದಲ್ಲಿ ಇತ್ತೀಚಿಗೆ ಬೆಂಗಳೂರು ನಗರದಲ್ಲಿ 7 ಕೋಟಿ ದರೋಡೆ ಪ್ರಕರಣ ತನಿಖೆ ನಡೆಯುತ್ತಿರುವಾಗಲೇ, ಮತ್ತೊಂದು ದರೋಡೆ ನಡೆದಿತ್ತು. ಚಿಕ್ಕಮಗಳೂರಲ್ಲಿ ಚಿನ್ನದ ವ್ಯಾಪಾರಿಯ ಕಾರು ಅಡ್ಡಗಟ್ಟಿ ನಗ ನಾಣ್ಯ ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಅದರ ಬಳಿಕ ಇದೀಗ ದಾವಣಗೆರೆಯಲ್ಲಿ ಚಿನ್ನದ ವ್ಯಾಪಾರಿ ಬಳಿ ಚಿನ್ನ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಪಿಎಸ್ಐ ಸೇರಿದಂತೆ ನಾಲ್ವರನ್ನು ದಾವಣಗೆರೆಯ ಕೆಟಿಜೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಪಿಎಸ್‍ಐಗಳನ್ನು ಮಾಳಪ್ಪ ಚಿಪ್ಪಲಕಟ್ಟಿ, ಪ್ರವೀಣ್ ಕುಮಾರ್ ಎಂದು ಗುರುತಿಸಲಾಗಿದೆ. ಈ ಇಬ್ಬರಿಗೆ ಸಹಕರಿಸಿದ್ದ ಚಿನ್ನದಂಗಡಿಯ ಕೆಲಸಗಾರರಾದ ಸತೀಶ್ ರೇವಣಕರ್, ನಾಗರಾಜ್ ರೇವಣಕರ್ ಎಂಬವರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಆರೋಪಿಗಳು ಪಿಎಸ್‍ಐಗಳಿಗೆ ವ್ಯಾಪಾರಿ ಬಳಿ ಚಿನ್ನ ಇರುವುದರ ಬಗ್ಗೆ ಮಾಹಿತಿ ನೀಡಿದ್ದರು ಎಂದು ತಿಳಿದುಬಂದಿದೆ. ಇಬ್ಪಿಬರು ಎಸ್‌ಐಗಳು ವರ್ಗಾವಣೆ ಆಗಿ ಐಜಿ ಅಫೀಸ್‌ನಲ್ಲಿ ರಿಪೋರ್ಟ್ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ಕಾರವಾರ ಮೂಲದ ವ್ಯಾಪಾರಿ ವಿಶ್ವನಾಥ್ ಅರ್ಕಸಾಲಿ ಎಂಬವರು 80 ಗ್ರಾಂ ಬಂಗಾರದ ಒಡವೆಗಳನ್ನು ತೆಗೆದುಕೊಂಡು ದಾವಣಗೆರೆಯ ಬಸ್ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಮಾಳಪ್ಪ ಚಿಪ್ಪಲಕಟ್ಟಿ, ಪ್ರವೀಣ್ ಕುಮಾರ್ ಸೇರಿ ವ್ಯಾಪಾರಿಗೆ ನಾವು ಐಜಿ ಸ್ಕ್ವಾಡ್ ಎಂದು ಹೇಳಿ ಹೆದರಿಸಿದ್ದರು. ಪೊಲೀಸ್ ಐಡಿ ಕಾರ್ಡ್, ನಕಲಿ ಗನ್ ತೋರಿಸಿ ಕೆಟಿಜೆ ನಗರ ಪೊಲೀಸ್ ಠಾಣೆಗೆ ಕಾರಿನಲ್ಲಿ ಕರೆದೊಯ್ದು, ಒಳಗೆ ಹೋಗದೆ ವಾಪಸ್ ಕರೆತಂದಿದ್ದರು.

ಬಳಿಕ ವ್ಯಾಪಾರಿಯ ಬಳಿ ಇದ್ದ ಬಂಗಾರವನ್ನು ಕಸಿದುಕೊಂಡು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದರು. ಬಂಗಾರ ಕಳೆದುಕೊಂಡ ವ್ಯಾಪಾರಿ ಕೆಟೆಜೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಕೆಟಿಜೆ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ನೀಟ್ ಹಗರಣ: ಕೇಂದ್ರದ ವೈಫಲ್ಯಕ್ಕೆ ರಾಜ್ಯ ಬಿಜೆಪಿ ನಾಯಕರ ಮೌನವೇಕೆ? ಸಚಿವ ಮಧು ಬಂಗಾರಪ್ಪ ಗುಡುಗು

2 Mins Read

ನಾಗಮಲೆ ಚಿರತೆ ದಾಳಿ: ಯುಗಾದಿ, ಶಿವರಾತ್ರಿ ಜಾತ್ರೆ ವೇಳೆ ಮಾತ್ರ ಕಾಲ್ನಡಿಗೆ ಅವಕಾಶ- ಸಚಿವ ಈಶ್ವರ ಖಂಡ್ರೆ

1 Min Read

GOOD NEWS: ರಾಜ್ಯದ ‘ಸಾರಿಗೆ ನೌಕರ’ರಿಗೆ ಭರ್ಜರಿ ಸಿಹಿಸುದ್ದಿ: ಶೇ.12.5ರಷ್ಟು ‘ಸಂಬಳ ಹೆಚ್ಚಿಸಿ’ ಅಧಿಕೃತ ಆದೇಶ

1 Min Read
Recent News

ಡೊನಾಲ್ಡ್ ಟ್ರಂಪ್ ಚೀನಾ ಪ್ರವಾಸ: ಮೇ 14ಕ್ಕೆ ಷಿ ಜಿನ್‌ಪಿಂಗ್-ಟ್ರಂಪ್ ಮಹತ್ವದ ಭೇಟಿ!

Vijay 5

ತಮಿಳುನಾಡು ವಿಧಾನಸಭೆಯಲ್ಲಿ ನಾಳೆ ಅಗ್ನಿಪರೀಕ್ಷೆ: ವಿಶ್ವಾಸಮತಕ್ಕೂ ಮುನ್ನ ಎಐಎಡಿಎಂಕೆ ಬಂಡಾಯ ಶಾಸಕರೊಂದಿಗೆ ಸಿಎಂ ವಿಜಯ್ ಮಹತ್ವದ ಸಭೆ!

ಜನರಿಗೆ ಚಿನ್ನ ಖರೀದಿಸಬೇಡಿ ಎಂದು ಹೇಳಿದ ಮೊದಲ ನಾಯಕ ಪ್ರಧಾನಿ ಮೋದಿ ಮಾತ್ರ ಅಲ್ಲ : ಸರ್ಕಾರಗಳು ಇಂತಹ ಮನವಿಗಳನ್ನು ಯಾಕೆ ಮಾಡುತ್ತವೆ ಎಂಬುದು ಇಲ್ಲಿದೆ

​’ಮತ್ತೆ ದಾಳಿ ನಡೆದರೆ 90% ಯುರೇನಿಯಂ ಸಮೃದ್ಧಿ’: ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ ಇರಾನ್‌ನಿಂದ ಆಣ್ವಿಕ ಬಾಂಬ್ ಬೆದರಿಕೆ!

State News
KARNATAKA

ನೀಟ್ ಹಗರಣ: ಕೇಂದ್ರದ ವೈಫಲ್ಯಕ್ಕೆ ರಾಜ್ಯ ಬಿಜೆಪಿ ನಾಯಕರ ಮೌನವೇಕೆ? ಸಚಿವ ಮಧು ಬಂಗಾರಪ್ಪ ಗುಡುಗು

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು : ಕೇಂದ್ರ ಸರ್ಕಾರವು ನೀಟ್ ಯುಜಿ 2026 ಪರೀಕ್ಷೆಯನ್ನು ರದ್ದುಗೊಳಿಸಿ, ಮರುಪರೀಕ್ಷೆಗೆ ಆದೇಶಿಸಿರುವ ಹಾಗೂ ಅಕ್ರಮಗಳ ಕುರಿತು ಸಿಬಿಐ…

ನಾಗಮಲೆ ಚಿರತೆ ದಾಳಿ: ಯುಗಾದಿ, ಶಿವರಾತ್ರಿ ಜಾತ್ರೆ ವೇಳೆ ಮಾತ್ರ ಕಾಲ್ನಡಿಗೆ ಅವಕಾಶ- ಸಚಿವ ಈಶ್ವರ ಖಂಡ್ರೆ

GOOD NEWS: ರಾಜ್ಯದ ‘ಸಾರಿಗೆ ನೌಕರ’ರಿಗೆ ಭರ್ಜರಿ ಸಿಹಿಸುದ್ದಿ: ಶೇ.12.5ರಷ್ಟು ‘ಸಂಬಳ ಹೆಚ್ಚಿಸಿ’ ಅಧಿಕೃತ ಆದೇಶ

BREAKING : ಸಾರಿಗೆ ನೌಕರರಿಗೆ ಗುಡ್ ನ್ಯೂಸ್ : ಶೇ.12.5 ರಷ್ಟು ಸಂಬಳ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.