ಗೋವಾ : ಭಾರತದಲ್ಲಿ ಮೋಜು ಮಸ್ತಿ ಮಾಡಲು ಇರುವ ಏಕೈಕ ಪ್ರದೇಶವೆಂದರೆ ಅದು ಗೋವಾ. ದೇಶದ ಅನೇಕ ರಾಜ್ಯ, ಹಾಗೂ ವಿದೇಶಿಗರಿಂದ ಗೋವಾ ರಾಜ್ಯ ಯಾವಾಗಲೂ ತುಂಬಿ ತುಳುಕುತ್ತಿರುತ್ತದೆ. ಇದೀಗ ಗೋವಾದಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ಪ್ಯಾರಾಗ್ಲೆಡಿಂಗ್ ಮಾಡುತ್ತಿದ್ದ ವೇಳೆ ಪ್ರವಾಸಕ್ಕೆಂದು ಆಗಮಿಸಿದ ಮಹಿಳೆ ಹಾಗೂ ತರಬೇತುದಾರ ಕಂದಕಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೌದು ಪ್ಯಾರಾಗ್ಲೆಡಿಂಗ್ ಮಾಡುತ್ತಿದ್ದ ವೇಳೆ ಕಂದಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪ್ರವಾಸಿ ಮಹಿಳೆ ಮತ್ತು ಆಕೆಯ ತರಬೇತುದಾರ ಸಾವನಪ್ಪಿದ ಘಟನೆ ಉತ್ತರ ಗೋವಾದಲ್ಲಿ ನಡೆದಿದೆ.ನಿನ್ನೆ ಸಂಜೆ ಕೇರಿ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಪುಣೆ ನಿವಾಸಿ ಶಿವಾನಿ ಡೇಬಲ್ ಮತ್ತು ಆಕೆಯ ತರಬೇತುದಾರ ನೇಪಾಳ ಪ್ರಜೆ ಸುಮಲ್ ಸಂಜೆ 5 ಗಂಟೆ ಸುಮಾರಿಗೆ ಕೇರಿ ಪ್ರಸ್ಥಭೂಮಿಯಲ್ಲಿ ಕಂದಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದರೆ.
ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ಸಾಹಸ ಕ್ರೀಡಾ ಕಂಪನಿಯಲ್ಲಿ ಶಿವಾನಿ ಪ್ಯಾರಾಗ್ಲೆಡ್ ಮಾಡಿದ್ದಾರೆ. ಪ್ಯಾರಾಗ್ಲೆಡರ್ ಬಂಡೆಯಿಂದ ಟೇಕಾಫ್ ಆದ ಕೂಡಲೇ ಕಮರಿಗೆ ಬಿದ್ದಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜೀವಕ್ಕೆ ಅಪಾಯ ತಂದೊಡ್ಡಿದ ಕಾರಣಕ್ಕೆ ಕಂಪನಿಯ ಮಾಲೀಕ ಶೇಖರ್ ರೈಜಾದಾ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.