ಗೋವಾ : ಕಳೆದ ಕೆಲವು ದಿನಗಳ ಹಿಂದೆ ಗೋವಾದಲ್ಲಿ ಭೀಕರ ಅಗ್ನಿ ದುರಂತದಲ್ಲಿ 25 ಜನ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ದುರಂತ ಸಂಭವಿಸಿದ್ದ ನೈಟ್ ಕ್ಲಬ್ ನ ಕಟ್ಟಡ ತೆರವುಗೊಳಿಸುವಂತೆ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಆದೇಶ ಹೊರಡಿಸಿದ್ದಾರೆ.
ಗೋವಾ ಮುಖ್ಯಮಂತ್ರಿ, ಪ್ರಮೋದ್ ಸಾವಂತ್ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಯಾವುದೇ ಕ್ಷಣದಲ್ಲಿ ನೈಟ್ ಕ್ಲಬ್ ಕಟ್ಟಡ ಧ್ವಂಸಗೊಳಿಸುವ ಸಾಧ್ಯತೆ ಇದೆ ಉತ್ತರ ಗೋವಾದ ಅರ್ಪೋರ ನೈಟ್ ಕ್ಲಬ್ ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿತ್ತು. ಘಟನೆಯಲ್ಲಿ 25 ಜನರು ಮೃತಪಟ್ಟಿದ್ದರು ಕ್ಲಬ್ ನ 14 ಸಿಬ್ಬಂದಿಗಳು 14 ಪ್ರವಾಸಿಗರು ಓರ್ವ ಕನ್ನಡಿಗನು ಸೇರಿದಂತೆ 25 ಜನರು ಸಜೀವ ದಹನಗೊಂಡಿದ್ದರು.








