ಬೆಂಗಳೂರು : ಬೆಂಗಳೂರಲ್ಲಿ ಅತ್ತೆಯನ್ನು ಕೊಲ್ಲಲು ವೈದ್ಯರ ಬಳಿ ಮಾತ್ರೆ ಕೇಳಿದ್ದ ಮಹಿಳೆಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಅತ್ತೆಯನ್ನು ಕೊಲ್ಲಲು ನಿರ್ಧರಿಸಿದ ಸೊಸೆ ಸಹಾನ ವೈದ್ಯರೊಬ್ಬರಿಗೆ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿದ್ದಾರೆ. ನನಗೆ ಅತ್ತೆ ಬಹಳ ಕಿರುಕುಳ, ಹಿಂಸೆ ನೀಡುತ್ತಾರೆ. ಅವರಿಗೆ ವಯಸ್ಸಾಗಿದ್ದು, ಅವರನ್ನು ಸಾಯಿಸಲು ಮಾತ್ರೆ ಇದ್ರೆ ಕೊಡಿ ಎಂದು ವೈದ್ಯರಿಗೆ ಸೊಸೆ ಮೆಸೇಜ್ ಮಾಡಿದ್ದಾರೆ.
ಮೆಸೇಜ್ ನೋಡಿ ಶಾಕ್ ಆದ ವೈದ್ಯರು ನಾವು ಜೀವ ತೆಗೆಯುವವರಲ್ಲ, ಜೀವ ಉಳಿಸುವವರು ಎಂದು ಬುದ್ದಿವಾದ ಹೇಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಡಾಕ್ಟರ್ ಬುದ್ದಿವಾದ ಹೇಳುತ್ತಿದ್ದಂತೆ ಸೊಸೆ ಮೆಸೇಜ್ ಡಿಲೀಟ್ ಮಾಡಿದ್ದಾರೆ. ತಕ್ಷಣ ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದ ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ, ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ಕೊಳ್ಳೇಗಾಲ ಮೂಲದ ಸಹನಾ ಸದ್ಯ ಬೆಂಗಳೂರಿನ ಚೌಟ್ರಿಪಾಳ್ಯದಲ್ಲಿದಲ್ಲಿ ವಾಸವಾಗಿದ್ದಾರೆ, ಪತಿ ಕ್ಯಾಬ್ ಚಾಲಕನಾಗಿದ್ದಾರೆ. ಮಹಿಳೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ವಿಚಾರಣೆಯಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಮಾತ್ರೆ ಕೇಳಿದ್ದಾಗಿ ಹೇಳಿದ್ದಾರೆ ಎನ್ನಲಾಗಿದೆ.