ಕೋಲಾರ : ನಿನ್ನೆ ತಾನೇ ಯಾದಗಿರಿಯಲ್ಲಿ ನೀರು ಕುಡಿಯಲು ಹೊಂಡಕ್ಕೆ ತೆರಳಿದ ಮೂವರು ಬಾಲಕರು ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದ ಘಟನೆ ನಡೆದಿದ್ದು, ಇದೀಗ ಕೋಲಾರದಲ್ಲಿ ಕೂಡ 10 ವರ್ಷದ ಬಾಲಕಿಯೋರ್ವಳು ಕೆರೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಬಾಲಕಿಯನ್ನು ಮೀನಾಕ್ಷಿ (10) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಬಾಲಕಿಯಾಗಿದ್ದು, ತೋಟದಲ್ಲಿ ಆಟವಾಡುತ್ತಿದ್ದ ಮಗು ಪಕ್ಕದ ಕೆರೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾಳೆ. ಘಟನೆ ಕುರಿತಂತೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.