ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಗ್ನಿ ಅವಘಡ ಸಂಭವಿಸಿದ್ದು ಗ್ಯಾಸ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡು ಐವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಬೆಂಗಳೂರಿನ ಚಿಕ್ಕಸಂದ್ರ ದಲ್ಲಿ ನಿನ್ನೆ ಈ ಒಂದು ಘಟನೆ ಸಂಭವಿಸಿದೆ.
ಅಂಶು ರಾಜ್ ಕುಮಾರ್, ಹುಸೇನ್ ಖಾನ್, ಆರ್ ಬೇಗ್ ಆಲಂ, ಮುಜಾಫಿರ್ ಹುಸೇನ್ ಹಾಗೂ ರೋಹಿತ್ ಚೌದರಿಗೆ ಗಂಭೀರವಾದ ಗಾಯಗಳಾಗಿದ್ದು, ಒಂದೇ ರೂಮ್ನಲ್ಲಿ ಬಿಹಾರ ಮೂಲದ ಕಾರ್ಮಿಕರು ಇದ್ದರು. ಗ್ಯಾಸ್ ಲೀಕ್ ಆಗಿದ್ದನ್ನು ಗಮನಿಸದೆ ಟೀ ಮಾಡುವ ಹೋದ ಸಂದರ್ಭದಲ್ಲಿ ಈ ಒಂದು ಘಟನೆ ಸಂಭವಿಸಿದೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದು. ಘಟನೆ ಸಂಭಂದ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








