ಮಂಗಳೂರು : ಇತ್ತೀಚಿಗೆ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೊಲೆ ಆರೋಪಿ ನಟ ದರ್ಶನ್ ಗೆ ರಾಜಾತಿಥ್ಯ ನೀಡುತ್ತಿರುವ ವಿಷಯ ಬಯಲಾಗಿತ್ತು. ಬಳಿಕ ಅಧಿಕಾರಿಗಳು ಅಲ್ಲಿ ತನಿಖೆ ನಡೆಸಿದ್ದರು. ಇದೀಗ ಮಂಗಳೂರು ಜೈಲಿನ ಒಳಗೆ ಗಾಂಜಾ ಸಪ್ಲೈ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಹೌದು ಮಂಗಳೂರು ಕಾರ್ಯಾಗೃಹಕ್ಕೆ ಗಾಂಜಾ ಸಪ್ಲೈ ಆಗುತ್ತಿದೆ. ಹಾಡಹಗಲೇ ಜೈಲು ಒಳಗೆ ಪುಂಡರು ಗಾಜಾ ಎಸೆಯೋ ದೃಶ್ಯ ಇದೀಗ ಸೆರೆಯಾಗಿದೆ.ಕಾರಿನ ಡ್ಯಾಶ್ ಕ್ಯಾಮ್ ನಲ್ಲಿಯೇ ಈ ಒಂದು ಕೃತ್ಯ ಸೆರೆಯಾಗಿದೆ. ರಸ್ತೆಯಿಂದ ಜೈಲು ಕಾಂಪೌಂಡ್ ಒಳಗೆ ಪುಂಡರು ಗಾಂಜಾ ಎಸೆದಿರುವ ದೃಶ್ಯ ಸೆರೆಯಾಗಿದೆ.
ಸ್ಕೂಟರ್ ನಲ್ಲಿ ಬಂದು ಪುಂಡರು ಗಾಜಾ ಎಸೆದು ಅಲ್ಲಿಂದ ಪರಾರಿ ಆಗಿರುವ ಘಟನೆ ನಡೆದಿದೆ.ಮಾಜಿ ಮೇಯರ್ ಕವಿತಾ ಸನಿಲ್ ಕಾರಿನ ಕ್ಯಾಮೆರಾದಲ್ಲಿ ಈ ಒಂದು ದೃಶ್ಯ ಸರಿಯಾಗಿದೆ ಎನ್ನಲಾಗಿದೆ.ರಸ್ತೆಯಿಂದ ಜೈಲು ಕಾಂಪೌಂಡ್ ಒಳಗೆ ಪುಂಡರು ಗಾಂಜಾ ಎಸೆದಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ಸ್ಕೂಟರ್ ನಲ್ಲಿ ಬಂದು ಪುಂಡರು ಗಾಜಾ ಎಸೆಯದು ಪರಾರಿಯಾಗಿದ್ದಾರೆ ಈ ವೇಳೆ ಮಾಜಿ ಮೇಯರ್ ಕವಿತಾ ಸನಿಲ್ ಸ್ಕೂಟರನ್ನು ಚೇಂಜ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.