ಬಾಗಲಕೋಟೆ : ಕೊಲ್ಕತ್ತಾದಲ್ಲಿ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬಾಗಲಕೋಟೆ ಮೂಲದ ವಿದ್ಯಾರ್ಥಿ ಪರಮಾನಂದ ಜೈನ್ ಎನ್ನುವ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶುಕ್ರವಾರ ರಾತ್ರಿ ಪರಮಾನಂದನನ್ನು ಪೊಲೀಸರು ಬಂಧಿಸಿ ಕರೆದೋಯ್ದಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ನಿವಾಸಿಯಾದ ಪರಮಾನಂದ ಐಐಎಂ ಕಾನೂನು ಕಾಲೇಜಿನಲ್ಲಿ ಓದುತ್ತಿದ್ದಾನೆ. ಹಾಸ್ಟೆಲಿಗೆ ಯುವತಿಯನ್ನು ಕರೆಸಿಕೊಂಡು, ಮತ್ತು ಬರುವ ಪಾನಿಯ ಕೊಡಿಸಿ ಪರಮಾನಂದ ಅತ್ಯಾಚಾರ ಎಸಗಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.ಜುಲೈ 12ರಂದು ಆರೋಪಿ ಪರಮಾನಂದನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದರೆ ಇತ್ತ ಯುವತಿಯ ಕುಟುಂಬಸ್ಥರು ಅತ್ಯಾಚಾರ ಆರೋಪವನ್ನು ತಳ್ಳಿ ಹಾಕಿದ್ದಾರೆ.