ಹಾವೇರಿ : ಕಳೆದ 2024 ಜನವರಿ 8ರಂದು ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ಮಹಿಳೆಯ ಮೇಲೆ ಗ್ಯಾಂಗ್ ರೇಪ್ ನಡೆದಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತ್ತೀಚಿಗೆ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗಿದ್ದರು. ಆದರೆ ಜೈಲಿನಿಂದ ರಿಲೀಸ್ ಆದ ಬೆನ್ನಲ್ಲೇ ಮೆರವಣಿಗೆ ರೋಡ್ ಶೋ ನಡೆಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಆರೋಪಿಗಳನ್ನು ಅರೆಸ್ಟ್ ಮಾಡಿದ್ದು, ಇದೀಗ ಜುಲೈ 3ರವರೆಗೆ ಆರೋಪಿಗಳು ಮತ್ತೆ ಜೈ ಸೇರಿದ್ದಾರೆ.
ರೋಡ್ ಶೋ ನಡೆಸಿದ್ದ 7 ಆರೋಪಿಗಳಿಗೆ ಜೂನ್ 2 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.ಆರೋಪಿಗಳಿಗೆ ತಾಲೂಕು ಮ್ಯಾಜಿಸ್ಟ್ರೇಟ್ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಈ ಹಿನ್ನೆಲೆ ಆರೋಪಿಗಳನ್ನ ಮತ್ತೆ ಹಾವೇರಿ ಸಬ್ ಜೈಲಿಗೆ ಹಾಕಲಾಗಿದೆ.
ಈ ಆರೋಪಿಗಳು ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ 17 ತಿಂಗಳು ಜೈಲಿನಲ್ಲಿದ್ದರು. ಕಳೆದ ನಾಲ್ಕು ದಿನಗಳ ಹಿಂದಷ್ಟೇ ಜಾಮೀನು ಪಡೆದು ಹೊರ ಬಂದಿದ್ದರು. ಜಾಮೀನು ಸಿಕ್ಕಿದ್ದೇ ತಡ ಆರೋಪಿಗಳು 30 ಕಿ.ಮೀ ರೋಡ್ ಶೋ ನಡೆಸಿದ್ದರು. ರೋಡ್ ಶೋ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದೀಗ ಮತ್ತೆ ಆರೋಪಿಗಳು ಜೈಲು ಪಾಲಾಗಿದ್ದಾರೆ.