ಬಳ್ಳಾರಿ : ಬಳ್ಳಾರಿಯಲ್ಲಿ ಮಗು ಕಳ್ಳರ ಗ್ಯಾಂಗ್ ಆಕ್ಟಿವ್ ಆಗಿದ್ದು, ಬುರ್ಖಾ ಧರಿಸಿದ್ದ ಮಹಿಳೆಯೊಬ್ಬಳು ಸಿನಿಮೀಯ ರೀತಿಯಲ್ಲಿ ಹಸುಗೂಸು ಅಪಹರಣ ಮಾಡಿರುವ ಘಟನೆ ನಡೆದಿದೆ.
ಬಳ್ಳಾರಿ ಮಹಾನಗರ ಪಾಲಿಕೆ ಆವರಣದಲ್ಲಿ ಶ್ರೀದೇವಿ-ರಮೇಶ್ ದಂಪತಿಯ ಮಗುವನ್ನು ಮಹಿಳೆಯೊಬ್ಬಳು ಅಪಹಾರಣ ಮಾಡಿ ಮಾರಾಟ ಮಾಡಿರುವ ಘಟನೆ ನಡೆದಿದ್ದು, ಈ ಬಗ್ಗೆ ಶ್ರೀದೇವಿ-ರಮೇಶ್ ದಂಪತಿ ಪೊಲೀಸರಿಗೆ ದೂರು ಕೊಟ್ಟಿದ್ದರು.
ಪೊಲೀಸರು ತನಿಖೆ ಕೈಗೊಂಡು ಮಗುವನ್ನು ಪತ್ತೆಹಚ್ಚಿ ಪೋಷಕರಿಗೆ ಮಗುವನ್ನು ಒಪ್ಪಿಸಲಾಗಿದೆ.ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.