ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ A1 ಆರೋಪಿ ಪವಿತ್ರಗೌಡಗೆ ಜೈಲಿನಲ್ಲಿ ಇಂದಿನಿಂದ ಮನೆ ಊಟ ಸಿಗುವ ಸಾಧ್ಯತೆ ಇದೆ. ಪವಿತ್ರಗೌಡಗೆ ಮನೆ ಊಟದ ಭಾಗ್ಯ ಕೋರ್ಟ್ ನೀಡಿದೆ. ಹಾಗಾದರೆ ಯಾವಾಗ ಊಟ ಬರುತ್ತದೆ ಯಾರು ಊಟ ತರುತ್ತಾರೆ ಇದೆಲ್ಲಾ ಮಾಹಿತಿಗಳನ್ನು ಜೈಲಾಧಿಕಾರಿಗಳಿಗೆ ಪವಿತ್ರಾ ಪರ ವಕೀಲರು ಮಾಹಿತಿ ನೀಡಿದ್ದಾರೆ. ನಾಲ್ವರು ಊಟ ತರುವುದಾಗಿ ವಕೀಲರು ಮಾಹಿತಿ ನೀಡಿದ್ದು ನಿನ್ನೆ ಪವಿತ್ರ ಗೌಡ ಪರವಕೀಲರು ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಹೀಗಾಗಿ ಇಂದಿನಿಂದ ಪವಿತ್ರ ಗೌಡಗೆ ಮನೆ ಊಟ ಸಿಗುವ ಸಾಧ್ಯತೆ ಇದೆ.
ಇನ್ನು ಪವಿತ್ರ ಗೌಡಗೆ ಮನೆ ಊಟ ಸಿಗುವ ವಿಷಯ ತಿಳಿದ ಬೆನ್ನಲ್ಲೆ ನಟ ದರ್ಶನ್ ಕೂಡ ನನಗೂ ಮನೆ ಊಟ ಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿದುಬಂದಿದೆ. ಜೈಲಿನ ಊಟ ನನಗೆ ಅಡ್ಜಸ್ಟ್ ಆಗುತ್ತಿಲ್ಲ ಎಂದು ಕೋರ್ಟ್ ಗೆ ಮನವಿ ಮಾಡಲಿದ್ದಾರೆ. ಕಳೆದ ಬಾರಿಗೂ ದರ್ಶನ್ ಕೋರ್ಟಿಗೆ ಮನವಿ ಮಾಡಿದ್ದರು. ಆದರೆ ಕೋರ್ಟ್ ದರ್ಶನ್ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಇದೀಗ ಪವಿತ್ರ ಗೌಡ ಬೆನ್ನ








