ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯಲು ಇನ್ಮುಂದೆ `ವಾಟರ್ ಬೆಲ್’ ಎಂಬ ಸಮಯ ನಿಗದಿ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿದೆ. ಮಕ್ಕಳು ಆಗಾಗ ನೀರು ಕುಡಿಯಲು ಜ್ಞಾಪಿಸಲು ‘ನೀರಿನ ಗಂಟೆ’ (ವಾಟರ್‌ಬೆಲ್) ಬಾರಿ ಸುವ ನಿಯಮ ಜಾರಿ ಗೊಳಿಸುವಂತೆ ಪಿಎಂ ಪೋಷಣ್ ಶಕ್ತಿ ಶಾಲೆಗಳಿಗೆ ಸೂಚಿಸಿದ್ದಾರೆ.
ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯಬೇಕೆಂಬ ಅರಿವು ಅಷ್ಟಾಗಿ ಇರುವುದಿಲ್ಲ. ಮಕ್ಕಳ ಬೆಳವಣಿಗೆಗೆ ಮತ್ತು ಆರೋಗ್ಯಕ್ಕೆ ನೀರು ಅತ್ಯವಶ್ಯಕವಾಗಿರುತ್ತದೆ. ಜೊತೆಗೆ ದೇಹದ ಉಷ್ಣತೆಯನ್ನು ನಿಯಂತ್ರಿಸುವುದರ ಜೊತೆಗೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ರಾಜ್ಯದಲ್ಲಿರುವ ಎಲ್.ಕೆ.ಜಿ, ಯು.ಕೆ.ಜಿ ಒಳಗೊಂಡಂತೆ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳಿಗೆ ಆಗಾಗ ನೀರು ಕುಡಿಯುವಂತೆ ಜ್ಞಾಪಿಸಲು ವಾಟರ್ ಬೆಲ್ ಅನುಷ್ಠಾನಗೊಳಿಸಲು ಸೂಚನೆ ನೀಡಿದೆ.
2022ರಲ್ಲೇ ನಿಯಮ ಜಾರಿಗೆ ಬಂದಿ ದ್ದರೂ ಸರಿಯಾಗಿ ಪಾಲನೆಯಾಗದ ಹಿನ್ನೆಲೆ ವಾಟರ್‌ಬೆಲ್ ನಿಯಮ ಜಾರಿಗೆ ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರು ಪತ್ರ ಬರೆದಿದ್ದರು. ಈ ಹಿನ್ನೆಲೆಎಲ್ ಕೆಜಿ, ಯುಕೆಜಿ ಮಕ್ಕಳು ಸೇರಿಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳ ಮಕ್ಕಳಿಗೆ ವಾಟರ್‌ಬೆಲ್ ನಿಯಮ ಜಾರಿ ಗೊಳಿಸು ವಂತೆ ಮತ್ತೊಮ್ಮೆ ಸೂಚನೆ ನೀಡ ಲಾಗಿದೆ. ಬೆಳಗ್ಗೆ 10.35ಕ್ಕೆ, ಮಧ್ಯಾಹ್ನ 12ಕ್ಕೆ ಮತ್ತು 2 ಗಂಟೆ ವಾಟರ್‌ಬೆಲ್ ಬಾರಿಸಲಾಗುತ್ತದೆ.








