ಬೆಂಗಳೂರು : ಸಾರ್ವಜನಿಕ ಸ್ಥಳಗಳಲ್ಲಿ ಗಣ್ಯರ ಸುರಕ್ಷತೆ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣ ಮಾಡಲು ಇದೀಗ ಪೊಲೀಸ್ ಮಹಾ ನಿರ್ದೇಶಕ ಡಾ. ಎಂಎ ಸಲೀಂ ಕರ್ನಾಟಕ ಪೋಲಿಸರಿಗೆ ಮಾಹತ್ವದ ಆದೇಶ ಹೊರಡಿಸಿದ್ದಾರೆ. ವಿವಿಐಪಿಗಳ ಸಂಚಾರದ ಸಂದರ್ಭದಲ್ಲಿ ಸೈರನ್ಗಳ ಬಳಕೆಯನ್ನು ಕಡಿಮೆ ಮಾಡುವಂತೆ ಆದೇಶ ಹೊರಡಿಸಿದ್ದಾರೆ.
ಹೌದು ಈ ವಿಚಾರವಾಗಿ ಸಲೀಂ ಸುತ್ತೋಲೆ ಹೊರಡಿಸಿದ್ದು, ವಿವಿಐಪಿಗಳ ಸಂಚಾರದ ವೇಳೆ ಅತಿಯಾದ ಸೈರನ್ ಬಳಕೆಯಿಂದ ಅನೇಕ ಸವಾಲುಗಳು ಎದುರಾಗುತ್ತಿವೆ. ಅನಗತ್ಯವಾಗಿ ಸೈರನ್ ಬಳಕೆ ಮಾಡುವುದರಿಂದ ಗಣ್ಯರು ಯಾವ ರಸ್ತೆಯಲ್ಲಿ ಚಲಿಸುತ್ತಿದ್ದಾರೆ ಎಂಬ ಕುರಿತು ಅಗತ್ಯವಿಲ್ಲದವರಿಗೆ ಕೂಡ ಮಾಹಿತಿ ರವಾನೆಯಾಗುತ್ತದೆ. ಇದರಿಂದ ವಿಐಪಿಗಳಿಗೆ ಮತ್ತು ಅವರ ಭದ್ರತೆಗೆ ತೊಂದರೆ ಉಂಟಾಗುವ ಅಪಾಯ ಕೂಡ ಇದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಆ್ಯಬುಬುಲೆನ್ಸ್, ಪೊಲೀಸ್ ವಾಹನಗಳು ಮತ್ತು ಅಗ್ನಿಶಾಮಕ ದಳ ವಾಹನಗಳ ಸಂಚಾರದಂಥ ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ಸೈರನ್ ಬಳಸಬೇಕು. ಈ ಆದೇಶವನ್ನು ಎಲ್ಲ ಅಧಿಕಾರಿಗಳು, ಸಿಬ್ಬಂದಿ, ಘಟಕ ಅಧಿಕಾರಿಗಳು ಪಾಲಿಸಬೇಕು ಎಂದು ಸಲಿಂ ಸೂಚನೆ ನೀಡಿದ್ದಾರೆ.ಅಷ್ಟೇ ಅಲ್ಲದೆ, ವಿವಿಐಪಿಗಳ ವಾಹನಗಳ ತುರ್ತು ಚಲನೆಗೆ ಸಂಬಂಧಿಸಿದಂತೆ ‘ವಯರ್ಲೆಸ್ ಕಮ್ಯುನಿಕೇಷನ್ ವ್ಯವಸ್ಥೆ. ಹಾಗೂ ಇತರ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಅವರು ಪೊಲೀಸರಿಗೆ ಸೂಚಿಸಿದ್ದಾರೆ.