ಉಡುಪಿ : ಉಡುಪಿ ಜಿಲ್ಲೆಯ ಬೈಂದುರು ಕೊಲ್ಲೂರು ಮೂಕಾಂಬಿಕ ದೇವಸ್ಥಾನ ಹೆಸರಲ್ಲಿ ನಕಲಿ ವೆಬ್ಸೈಟ್ ತೆರೆದು ವಂಚನೆ ಎಸುಗುತಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನಾಸಿರ್ ಹುಸೇನ್ ಎಂದು ತಿಳಿದು ಬಂದಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್ಸೈಟ್ ತೆರೆದು ಬಂಧಿತ ಆರೋಪಿ ನಾಸಿರ್ ವಂಚನೆ ಎಸಗುತ್ತಿದ್ದ ರಾಜಸ್ಥಾನದ ತಿಜೋರಿಯ ನಾಸಿರ್ ಹುಸೇನ್. ಈತ ಅಧಿಕೃತ ವೆಬ್ಸೈಟ್ ಹೋಲುವ ರೀತಿಯಲ್ಲಿ ನಕಲಿ ವೆಬ್ಸೈಟ್ ಕ್ರಿಯೇಟ್ ಮಾಡಿದ್ದ ಭಕ್ತರಿಂದ ಮುಂಗಡವಾಗಿ ರೂಮ್ ಬುಕಿಂಗ್ ಮಾಡಿಸಿಕೊಳ್ಳಲಾಗುತ್ತಿತ್ತು. ಸ್ಕ್ಯಾನರ್ ಮೂಲಕ ಹಣವನ್ನು ಪಡೆದು ನಕಲಿ ರಶೀದಿ ವಂಚನೆ ಸಿಗುತ್ತಿದ್ದ ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿ ದೂರು ಆಧರಿಸಿ ಇದೀಗ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.








