ಬೆಂಗಳೂರು : ನಿನ್ನೆ ರಾತ್ರಿ ಸುಮಾರು 11 ಗಂಟೆಗೆ ಬೃಹತ್ ಗಾತ್ರದ ಮರದ ಕೊಂಬೆ ಒಂದು ಹಠಾತ್ತನೆ ಕಾರಿನ ಮೇಲೆ ಬಿದ್ದ ಪರಿಣಾಮ, ಕಾರಿನಲ್ಲಿ ಚಲಿಸುತ್ತಿದ್ದ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು. ಮಗು ಸೇರಿ ಉಳಿದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪ್ಯಾಲೇಸ್ ರೋಡ್ ಅಂಡರ್ ಪಾಸ್ ಬಳಿ ನಡೆದಿದೆ.
ನಿನ್ನೆ ರಾತ್ರಿ 11 ಗಂಟೆಯ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರದ ಕೊಂಬೆಯೊಂದು ಬಿದ್ದಿದೆ. ಕಾರು ಸಂಪೂರ್ಣ ಜಖಂ ಆಗಿದ್ದು, ಚಾಲಕ ಕಾರ್ತಿಕ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಗುವಿನ ಸಮೇತ ಆರ್ ಟಿ ನಗರದ ಕಡೆಗೆ ನಾಲ್ವರು ಕಾರಿನಲ್ಲಿ ತೆರಳುತ್ತಿದ್ದರು.
ಈ ವೇಳೆ ಸಡನ್ ಆಗಿ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ, ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಉಳಿದ ನಾಲ್ವರು ಪಾರಾಗಿದ್ದಾರೆ. ಪೊಲೀಸರು ಬಂದು ರಸ್ತೆಯನ್ನು ಕ್ಲಿಯರ್ ಮಾಡಿದ ಬಳಿಕ, ಸುಮಾರು ಒಂದು ಗಂಟೆಗೆ ಬಿಬಿಎಂಪಿ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿದ್ದಾರೆ.