ತೆಲಂಗಾಣ : ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದಾಗ ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ಯಲ್ಲಾರೆಡ್ಡಿ ತಾಲೂಕಿನ ವೆಂಕಟಪುರ ಗ್ರಾಮದಲ್ಲಿ ಈ ಒಂದು ದುರಂತ ಸಂಭವಿಸಿದೆ.
ತೆಲಂಗಾಣದಲ್ಲಿ ಕೆರೆಯಲ್ಲಿ ಮುಳುಗಿ ನಾಲ್ವರು ಸಾವನ್ನಪ್ಪಿದ್ದಾರೆ. ಒಂದೇ ಕುಟುಂಬದ ನಾಲ್ವರು ಮುಳಗಿ ಸಾವನಪ್ಪಿದ್ದಾರೆ. ದುರಂತದಲ್ಲಿ ತಾಯಿ, ಇಬ್ಬರು ಪುತ್ರರು ಹಾಗೂ ಪುತ್ರಿ ಸಾವನಪ್ಪಿದ್ದಾರೆ ಎಂದು ಮಾಹಿತಿ ಬಂದಿದೆ. ಯಲ್ಲಾರೆಡ್ಡಿ ತಾಲೂಕಿನ ವೆಂಕಟಪುರ ಬಳಿ ಈ ಒಂದು ಘಟನೆ ನಡೆದಿದೆ. ಕೆರೆಯಲ್ಲಿ ಬಟ್ಟೆ ಒಗೆಯಲು ಹೋಗಿದ್ದಾಗ ಈ ಒಂದು ದುರಂತ ಸಂಭವಿಸಿದೆ.