ವಿಜಯನಗರ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ತಡೆಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡಿದ್ದರೂ ಸಹ ರಾಜ್ಯದಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ನಿಲ್ಲುತ್ತಿಲ್ಲ. ಇದೀಗ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆಫಲಕಾರಿಯಾಗದೆ ಕುಟುಂಬದ ಯಜಮಾನ ಸಾವನ್ನಪ್ಪಿದ್ದಾರೆ.
ಹೌದು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಸ್ನಾನಘಟ್ಟದ ಬಳಿ ಸಾಲ ಬಾಧೆಗೆ ಬೇಸತ್ತು, ಒಂದೇ ಕುಟುಂಬದ ಇಬ್ಬರು ಮಕ್ಕಳ ಸಹಿತ ದಂಪತಿಗಳು ಸೇರಿ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ಬಳಿಕ ದಂಪತಿಗಳು ತಾವು ವಿಷ ಸೇವಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸೌಮ್ಯ ಪತಿ ಚಂದ್ರಯ್ಯ (42) ಸಾವನಪ್ಪಿದ್ದಾರೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ನಿವಾಸಿ ಚಂದ್ರಯ್ಯ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಸೌಮ್ಯ (35) ಮತ್ತು ಮಕ್ಕಳಾದ ಭವಾನಿ ಶಿವಕುಮಾರ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಹೊಸಪೇಟೆಯ ನೂರು ಹಾಸಿಗೆ ಉಳ್ಳ ಆಸ್ಪತ್ರೆಯಲ್ಲಿ ಇವರಿಗೆ ಚಿಕಿತ್ಸೆ ಮುಂದುವರೆದಿದೆ. ಕಳೆದ ಆರು ವರ್ಷದಿಂದ ಕೊಟ್ಟೂರಿನಲ್ಲಿ ಮೃತ ಚಂದ್ರಯ್ಯ SBI ಸೇವಾಕೇಂದ್ರವನ್ನು ನಡೆಸುತ್ತಿದ್ದರು.
10 ಲಕ್ಷಕ್ಕೂ ಹೆಚ್ಚು ಕೈಗಳ ಸಾಲ ಮಾಡಿಕೊಂಡಿದ್ದ ಮೃತಚಂದ್ರಯ್ಯ ಸಾಲಗಾರರ ಕಿರುಕುಳದಿಂದ ಬೇಸತ್ತು ಕುಟುಂಬ ನೆನ್ನೆ ಹಂಪಿಗೆ ಬಂದಿತ್ತು ಇಂದು ಬೆಳಿಗ್ಗೆ ಹಂಪಿಯಲ್ಲಿ ವಿಷ ಸೇವಿಸಿ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಿಕಿತ್ಸೆ ಫಲಿಸದೆ ಕುಟುಂಬದ ಯಜಮಾನ ಚಂದ್ರಯ್ಯ 42 ಸಾವನ್ನಪ್ಪಿದ್ದಾರೆ. ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.