ಇಡುಕ್ಕಿ: ಕೇರಳದ ಇಡುಕ್ಕಿಯ ಮಂಕುಲಂನ ಅನಕುಲಂ ಬಳಿ ಮಂಗಳವಾರ ಪ್ರವಾಸಿ ವಾಹನ ಅಪಘಾತಕ್ಕೀಡಾಗಿ ನಾಲ್ವರು ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಟೆಂಪೋ ಟ್ರಾವೆಲರ್ ಕಮರಿಗೆ ಉರುಳಿ ಬಿದ್ದು ದುರಂತ ಸಂಭವಿಸಿದೆ.
ಮೃತರು ತಮಿಳುನಾಡಿನ ನಿವಾಸಿಗಳಾದ ಪಿಕೆ ಸೇತು (34), ಅಭಿನವ್, ಗುಣಶೇಖರನ್ (70), ಮತ್ತು ಥಾನ್ವಿಕ್ (1) ಎಂದು ಹೇಳಲಾಗುತ್ತಿದೆ.ಪೇಮಾರಂ ತಿರುವಿನಲ್ಲಿ ಈ ದುರಂತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ವಾಹನ ಕ್ರ್ಯಾಶ್ ಬ್ಯಾರಿಯರ್ ಗೆ ಡಿಕ್ಕಿ ಹೊಡೆದಿದೆ. ವಾಹನ ಕಮರಿಗೆ ಬಿದ್ದಿದೆ.
ಎಲ್ಲಾ ಗಾಯಾಳುಗಳನ್ನು ತೊಡುಪುಳ ಮತ್ತು ಆದಿಮಾಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ವಾಹನದೊಳಗೆ ಹದಿನಾಲ್ಕು ಮಂದಿ ಇದ್ದರು ಎನ್ನಲಾಗಿದೆ.