ಮೈಸೂರು : ರಾಜ್ಯದಲ್ಲಿ ನಿರಂತರ ಮಳೆ ಆಗುತ್ತಿರುವುದರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಅವಾಂತರ ಸೃಷ್ಟಿಯಾಗಿದ್ದು, ಹಲವರು ಜೀವವನ್ನು ಕೂಡ ಕಳೆದುಕೊಂಡಿದ್ದಾರೆ. ಇದೀಗ ಮೈಸೂರಿನಲ್ಲಿ ನಿರಂತರ ಮಳೆಯಿಂದಾಗಿ ಒಲಂಪಿಯ ಚಿತ್ರಮಂದಿರದ ಹಿಂಬದಿ ಗೋಡೆ ಕುಸಿದು ನಾಲ್ವರು ಗಂಭೀರವಾಗಿರುವ ಘಟನೆ ಇಂದು ನಡೆದಿದೆ.
ಹೌದು ಮೈಸೂರಿನ ಒಲಂಪಿಯ ಚಿತ್ರಮಂದಿರದ ಗೋಡೆ ಕುಸಿತವಾಗಿದ್ದು, ನಿರಂತರ ಮಳೆಗೆ ಚಿತ್ರಮಂದಿರದ ಹಿಂಬದಿ ಗೋಡೆ ಕುಸಿತವಾಗಿದೆ. ಈ ವೇಳೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.
ತಬರೀಸ್, ಅರ್ಮಾನ್ ಎಂಬುವರಿಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಗಾಯಾಳುಗಳನ್ನು ಕೆ.ಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಗೋಡೆ ಕುಸಿತದಲ್ಲಿ ಅವಶೇಷಗಳ ಅಡಿ ಸಿಲುಕಿದವರನ್ನು ಅಗ್ನಿಶಾಮಕದಳ ಇದೆ ವೇಳೆ ಆಗಮಿಸಿ ರಕ್ಷಿಸಿದ್ದಾರೆ ಜೆಸಿಬಿ ಯಂತ್ರದ ಮೂಲಕ ಇದೀಗ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.