ಬೆಂಗಳೂರು : ನಕಲಿ ಮದ್ಯ ತಯಾರಿಸುತ್ತಿದ್ದ ಗೋದಾಮಿನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಗಂಗೊಂಡಹಳ್ಳಿ ಮತ್ತು ಪೀಣ್ಯದಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ. ಗೋದಾಮಿನಲ್ಲಿ ಇದ್ದಂತಹ 70 ಲಕ್ಷಕ್ಕೂ ಹೆಚ್ಚು ಮೌಲ್ಯದವನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ದಾಳಿಯ ವೇಳೆ ರವಿ ಅಲಿಯಾಸ್ ಮರಿರಾಜ, ಕೇಶವಮೂರ್ತಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಮಾದನಾಯಕನಹಳ್ಳಿ ಪೊಲೀಸರು ದಾಳಿ ಮಾಡಿದ್ದಾರೆ. ನಕಲಿ ಮದ್ಯಕ್ಕೆ ಅಮಲು ಬರುವ ಪದಾರ್ಥ ಮತ್ತು ಬಣ್ಣ ಮಿಶ್ರಣ ಮಾಡಿ ಬಾಟಲಿಗೆ ನಕಲಿ ಮದ್ಯ ತುಂಬಿ ದುಬಾರಿ ಬ್ರಾಂಡ್ ಲೇಬಲ್ ಅನ್ನು ಅಂಟಿಸುತ್ತಿದ್ದರು.
ಗಂಗೊಂಡಹಳ್ಳಿಯಲ್ಲಿ 90 ಬ್ಯಾರೆಲ್ ನಲ್ಲಿದ್ದ 4260 ಲೀಟರ್ ಮದ್ಯವನ್ನ ಜಪ್ತಿ ಮಾಡಿದ್ದು, ಪೀಣ್ಯದಲ್ಲಿ 104 ಬ್ಯಾರಲ್ ಗಳಲ್ಲಿದ್ದ 5616 ಲೀಟರ್ ನಕಲಿ ಮದ್ಯವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ತಮಿಳುನಾಡು ಸೇರಿ ಕರ್ನಾಟಕದ ಹಲವಡೆ ಹಣ ಸಂಪಾದನೆಗೆ ಈ ಕೃತ್ಯ ಎಸೆಗಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಅನುಮಾನ ಬಾರದಂತೆ ಗೋದಾ ಮಿಗೆ ಪೊಲೀಸ್ ಬೋರ್ಡ್ ಹಾಕಿ ದಂಧೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ ಪಿ ಸಿ ಕೆ ಬಾಬಾ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.ನೆಲಮಂಗಲದ ಡಿವೈಎಸ್ಪಿ ಜಗದೀಶ್ ಅವರಿಂದ ಸಿಕೆ ಬಾಬಾ ಮಾಹಿತಿ ಪಡೆದುಕೊಂಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ BNS 13, 14, 32, 38(1) E ಆಕ್ಟ್ ಜೊತೆಗೆ 286 ಬಿಎನ್ಎಸ್ 2023ರ ಅಡಿ ಪ್ರಕರಣ ದಾಖಲಾಗಿದೆ.