ಬೆಂಗಳೂರು : ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ.ಎನ್ ಪುಟ್ಟೇಗೌಡ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇಂದು ಬೆಂಗಳೂರಿನ ಸ್ವಗೃಹದಲ್ಲಿ ಕೆ ಎನ್ ಪುಟ್ಟೇಗೌಡ ಅವರು ನಿಧನರಾಗಿದ್ದಾರೆ. ದೃಷ್ಟಿ ಹೀನರಿಗೆ ನೆರವಾಗಲೆಂದು ಅವರ ನೇತೃದಾನ ಮಾಡಲಾಗುತ್ತಿದೆ.
ಕುಟುಂಬಸ್ಥರ ಮಾಹಿತಿ ಪ್ರಕಾರ ಆದಿಚುಂಚನಗಿರಿ ಆಸ್ಪತ್ರೆಗೆ ಕೆ.ಎನ್ ಪುಟ್ಟೇಗೌಡ ದೇಹದಾನ ಮಾಡಲು ಇದೀಗ ಕುಟುಂಬಸ್ಥರು ನಿರ್ಧರಿಸಿದ್ದಾರೆ. ಕೆ.ಎನ್ ಪುಟ್ಟೇಗೌಡ ಪ್ರಮಾಣಿಕ ಮತ್ತು ಮೌಲ್ಯಯುತ ವಕೀಲರಾಗಿ ಹೆಸರಾಗಿದ್ದರು. ಬಿಬಿಎಂಪಿ ವಕೀಲರಾಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ರಕ್ಷಿಸಿದ್ದರು. ವಕೀಲರ ಸಂಘದ ಅಧ್ಯಕ್ಷರಾಗಿಯೂ ಕೂಡ ಉತ್ತಮ ಆಡಳಿತವನ್ನು ನಡೆಸಿದ್ದರು.