ಹಾವೇರಿ : ರಾಜ್ಯದ ಮೂರು ಉಪಚುನಾವಣೆಗಳ ಕ್ಷೇತ್ರಗಳ ಪೈಕಿ ಇದೀಗ ಶಿಗ್ಗಾವಿ ಕಾಂಗ್ರೆಸ್ ಅಲ್ಲಿ ಬಂಡಾಯದ ಬಿಸಿ ಹೆಚ್ಚಿದ್ದು ಈಗಾಗಲೇ ಅಜ್ಜಂಪೀರ್ ಖಾದ್ರಿ ಅವರು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಸಂಸದ ಮಂಜುನಾಥ್ ಕುನ್ನೂರ್ ಕೂಡ ಪಕ್ಷೇತರ ಅಭ್ಯರ್ಥಿಯಾಗಿ ನಾವ್ ಪತ್ರ ಸಲ್ಲಿಸಿದ್ದಾರೆ.
ಹೌದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮಂಜುನಾಥ್ ಕುನ್ನೂರ್. ಶಿಗ್ಗಾವಿ ಪಕ್ಷೇತರ ಅಭ್ಯರ್ಥಿಯಾಗಿ ಮಂಜುನಾಥ್ ಕುನ್ನೂರ್ ನಾಮಪತ್ರ ಸಲ್ಲಿಸಿದ್ದಾರೆ. ಮಗ ರಾಜು ಕುನ್ನುರ್ ರಿಗೆ ಮಂಜುನಾಥ್ ಕುನ್ನೂರ್ ಕಾಂಗ್ರೆಸ್ ಟಿಕೆಟ್ ಕೇಳಿದ್ದರು. ಆದರೆ ಯಾಸಿರ್ ಅಹ್ಮದ್ ಪಠಾನ್ ಗೆ ಟಿಕೆಟ್ ನೀಡಿದೆ ಹಿನ್ನೆಲೆಯಲ್ಲಿ ಶಿಗ್ಗಾವಿ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
ಈಗಾಗಲೇ ಅಜ್ಜಂಪಿರ್ ಖಾದ್ರಿ ಬಂಡಾಯ ಅಭ್ಯರ್ಥಿಯಾಗಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಗ್ಗಾವಿ ಕಾಂಗ್ರೆಸ್ ನಲ್ಲಿ ಈ ಇಬ್ಬರು ನಾಯಕರ ನಡೆಯಿಂದ ಕಾಂಗ್ರೆಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ.