ಮಂಡ್ಯ : ತಾನು ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ತಂಗಿ ಎಂದು ಹೇಳಿಕೊಂಡು, ಚಿನ್ನದಂಗಡಿ ಮಾಲಕಿಯಿಂದ 8.41 ಕೋಟಿ ರು. ಮೌಲ್ಯದ 14.6 ಕೆ.ಜಿ.ಚಿನ್ನ ಸಾಲ ಪಡೆದು ಒಂಟಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಾರಿ ಶಾಸಕ ಕೆ ಅನ್ನದಾನಿ ಅವರು ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದು ಇದರಲ್ಲಿ ನರೇಂದ್ರಸ್ವಾಮಿಯವರ ಕೈವಾಡ ಇರುವ ಶಂಕೆ ಇದೆ ಎಂದು ಆರೋಪಿಸಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಐಶ್ವರ್ಯಗೌಡ ಜೊತೆಗೆ ಶಾಸಕರಿಗೂ ನಂಟಿರುವ ಶಂಕೆಯಿದೆ.ಅಷ್ಟೇ ಅಲ್ಲ ಸಾಕಷ್ಟು ಕಾಂಗ್ರೆಸ್ ನಾಯಕರು ಪಾತ್ರದ ಶಂಕೆ ಇದೆ. ಐಶ್ವರ್ಯ ಗೌಡಳನ್ನು ಮಂಪರು ಪರೀಕ್ಷೆಗೆ ಒಳಪಡಿಸಲಿ. ಹಾಗೆ ವಂಚನೆ ಕಿರುಗಾವಲಿನಿಂದ ಬೆಂಗಳೂರಿನವರಿಗೆ ನಡೆದಿದೆ ಹೀಗಾಗಿ ಕಿರುಗಾವಲಿನಿಂದ ತನಿಖೆ ಆಗಬೇಕು.ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಂಡ್ಯದಲ್ಲಿ ಮಾಜಿ ಶಾಸಕ ಅನ್ನದಾನಿ ಹೇಳಿಕೆ ನೀಡಿದ್ದಾರೆ.
ಐಶ್ವರ್ಯ ವಿರುದ್ಧ ಮತ್ತೊಂದು ‘FIR’
ಈಗಾಗಲೇ ವಂಚನೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನು ಮೇಲೆ ಹೊರಗಡೆ ಬಂದ ಐಶ್ವರ್ಯ ಗೌಡಗೆ, ಮತ್ತೊಂದು ಸಂಕಷ್ಟ ಎದುರಾಗಿದ್ದು, 55 ಲಕ್ಷ ದೋಖಾ ಪ್ರಕರಣ ಸಂಬಂಧ ಮಂಡ್ಯದಲ್ಲಿ ಐಶ್ವರ್ಯ ಗೌಡ ವಿರುದ್ಧ ಇದೀಗ ಮತ್ತೊಂದು ದೂರು ದಾಖಲಾಗಿದೆ. ಸೈಟ್ ಆಸೆ ತೋರಿಸಿ ಹಣ ಪಡೆದು ವಂಚಿಸಿರುವ ಆರೋಪ ಕೇಳಿ ಬಂದಿದ್ದು, ರವಿಕುಮಾರ್ ಹಾಗೂ ಪೂರ್ಣಿಮಾ ಅವರಿಂದ ಇದೀಗ ಮತ್ತೊಂದು ದೂರು ದಾಖಲಾಗಿದೆ.
ಮಂಡ್ಯ ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ಐಶ್ವರ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಐಪಿಎಸ್ ಸೆಕ್ಷನ್ 416, 417, 420, 510, 34ರ ಅಡಿಯಲ್ಲಿ ಐಶ್ವರ್ಯ ಹಾಗೂ ಪತಿ ಹರೀಶ್, ಸೋದರ ಹಳ್ಳಿಮಂಜು ವಿರುದ್ಧ ಇದೀಗ FIR ದಾಖಲಾಗಿದೆ.