ಬೆಂಗಳೂರು :ಆಸ್ತಿ ವಿಚಾರವಾಗಿ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಿವಾಸದಲ್ಲಿ ಕರ್ನಾಟಕದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರು ಪತ್ನಿ ಪಲ್ಲವಿ ಅವರಿಂದ ಭೀಕರವಾಗಿ ಕೊಲೆಯಾಗಿದ್ದರು ಇದೀಗ ಇಂದು ಪಂಚಭೂತಗಳಲ್ಲಿ ಓಂ ಪ್ರಕಾಶ್ ಅವರು ಲೀನವಾದರು.
ಹೌದು ಬೆಂಗಳೂರಿನ ವಿಲ್ಸನ್ ಗಾರ್ಡನ್ ವಿದ್ಯುತ್ ಚಿತಾಗಾರ ದಲ್ಲಿ ಓಂ ಪ್ರಕಾಶ್ ಅಂತ್ಯಕ್ರಿಯೆ ನೆರವೇರಿತು. ಓಂ ಪ್ರಕಾಶ್ ಪುತ್ರ ಕಾರ್ತಿಕೇಶ್ ಅವರಿಂದ ಓಂ ಪ್ರಕಾಶ್ ಅವರ ಮೃತದೇಹಕ್ಕೆ ಅಗ್ನಿ ಸ್ಪರ್ಶ ಮಾಡಿದರು. ಪೊಲೀಸ್ ಗೌರವದೊಂದಿಗೆ ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅಂತ್ಯಕ್ರಿಯೆ ನೆರವೇರಿತು.
ಈ ವೇಳೆ ಕುಟುಂಬದವರು ಸ್ನೇಹಿತರು ಮತ್ತು ನಿವೃತ್ತ ಐಪಿಎಸ್ ಅಧಿಕಾರಿಗಳಾದ ಚಂದುಲಾಲ್, ಕಿಶೋರ ಚಂದ್ರ, ರಾಣಾ, ಗಾಂವ್ಕರ್, ಮುನಿಕೃಷ್ಣ, ಟಿ.ಜಯಪ್ರಕಾಶ್, ಎಂ ಎನ್ ರೆಡ್ಡಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದೇ ಸಂದರ್ಭದಲ್ಲಿ ಉಪಸ್ಥಿತಿ ಇದ್ದರು. ಅಂತ್ಯಕ್ರಿಯೆಗೆ ಮುನ್ನ ಪೊಲೀಸರು ಮೂರು ಸುತ್ತು ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ಓಂ ಪ್ರಕಾಶ್ ಅವರಿಗೆ ಅಂತಿಮ ಗೌರವ ಸಲ್ಲಿಸಿದರು.