ನವದೆಹಲಿ: ಬಿಜೆಪಿ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಗೆ ದಾಖಲಿಸಲಾಗಿದೆ ವರದಿಯಾಗಿದೆ.
96 ವರ್ಷದ ಎಲ್.ಕೆ. ಅಡ್ವಾಣಿ ಅನಾರೋಗ್ಯದ ಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್ನ ವೃದ್ಧಾಪ್ಯ ವಿಭಾಗದ ವೈದ್ಯರ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ. ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ಪಡೆದ ಕೇವಲ ಮೂರು ತಿಂಗಳ ನಂತರ ಮಾಜಿ ಉಪ ಪ್ರಧಾನಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎಲ್.ಕೆ.ಅಡ್ವಾಣಿ ಅವರು ಜೂನ್ 2002 ರಿಂದ ಮೇ 2004 ರವರೆಗೆ ಭಾರತದ ಉಪ ಪ್ರಧಾನಿಯಾಗಿ ಮತ್ತು ಅಕ್ಟೋಬರ್ 1999 ರಿಂದ ಮೇ 2004 ರವರೆಗೆ ಕೇಂದ್ರ ಗೃಹ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು 1986 ರಿಂದ 1990, 1993 ರಿಂದ 1998 ಮತ್ತು 2004 ರಿಂದ 2005 ರವರೆಗೆ ಬಿಜೆಪಿ ಅಧ್ಯಕ್ಷರಾಗಿದ್ದರು.
Delhi: Veteran BJP leader LK Advani has been admitted to AIIMS. He is stable and under observation: AIIMS pic.twitter.com/5anzY6XaNa
— ANI (@ANI) June 26, 2024