ಬೆಂಗಳೂರು : ಸಾಮಾಜಿಕ ಜ್ವರ ತಂಡದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ದರ್ಶನ್ ಪತ್ನಿ ಸಿಟಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಿಸಿಬಿ ಮುಖ್ಯಸ್ಥ ಅಜಯ್ ಹಿಲೋರಿಗೆ ದೂರು ನೀಡಿದ್ದಾರೆ.ದರ್ಶನ್ ಪತ್ನಿ ವಿಜಯಲಕ್ಷ್ಮಿ ದೂರು ಸೀಕರಿಸಿರುವ ACP ಉಮೇಶ್ 15ಕ್ಕೂ ಹೆಚ್ಚು ಇನ್ಸ್ಟಾಗ್ರಾಮ್ ಖಾತೆಗಳು ಮಾಹಿತಿ ನೀಡಿದ್ದಾರೆ. ಐಟಿ ಆಕ್ಟ್, ಮಹಿಳೆ ಗೌರವಕ್ಕೆ ಧಕ್ಕೆ, ನಿಂದನೆ & ಬೆದರಿಕೆ ಹಿನ್ನೆಲೆ ವಿವಿಧ ಸೆಕ್ಷನ್ ಗಳಡಿ ಕೇಸ್ ದಾಖಲಿಸಿದ್ದಾರೆ. ಕೇಸ್ ದಾಖಲು ಬಳಿಕ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಲಿದ್ದಾರೆ.








